Posts

Showing posts from August, 2021

ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ತೂಗೀರೆ ರಂಗನ ತೂಗೀರೆ ಕೃಷ್ಣನ | ಪುರಂದರ ವಿಠಲ | Toogire Rangana Toogire Krishnana | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ತೂಗೀರೆ ರಂಗನ ತೂಗೀರೆ ಕೃಷ್ಣನ  ತೂಗೀರೆ ಅಚ್ಯುತಾನಂತನ |  ತೂಗೀರೆ ವರಗಿರಿಯಪ್ಪ ತಿಮ್ಮಪ್ಪನ  ತೂಗೀರೆ ಕಾವೇರಿ ರಂಗಯ್ಯನ ||ಪ|| ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ | ನಾಗಕನ್ನಿಕೆಯರು ತೂಗೀರೆ | ನಾಗವೇಣಿಯರು ನೇಣು ಹಿಡಿದುಕೊಂಡು | ಬೇಗನೆ ತೊಟ್ಟಿಲ ತೂಗೀರೆ ||೧|| ಇಂದ್ರ ಲೋಕದಲ್ಲಿ ಉಪೇಂದ್ರ ಮಲಗ್ಯಾನೆ | ಇಂದುಮುಖಿಯರೆಲ್ಲ ತೂಗೀರೆ | ಇಂದ್ರಕನ್ನಿಕೆಯರು ಚೆಂದದಿಂದಲಿ ಬಂದು ಮುಕುಂದನ ತೊಟ್ಟಿಲ ತೂಗೀರೆ ||೨|| ಆಲದೆಲೆಯ ಮೇಲೆ ಶ್ರೀಲೋಲ ಮಲಗ್ಯಾನೆ | ನೀಲಕುಂತಳೆಯರು ತೂಗೀರೆ | ವ್ಯಾಳಶಯನ ಹರಿ ಮಲಗು ಮಲಗು ಎಂದು ಬಾಲಕೃಷ್ಣಯ್ಯನ ತೂಗೀರೆ ||೩|| ಸಾಸಿರ ನಾಮನೆ ಸರ್ವೋತ್ತಮನೆಂದು | ಸೂಸುತ್ತ ತೊಟ್ಟಿಲ ತೂಗೀರೆ || ಲೇಸಾಗಿ ಮಡುವಿನೊಳ್ ಶೇಷನ್ನ  ತುಳಿದಿಟ್ಟ ದೋಷ ವಿದೂರನ್ನ ತೂಗೀರೆ ||೪|| ಅರಳೆಲೆ ಮಾಗಾಯಿ ಕೊರಳ ಮುತ್ತಿನ ಹಾರ | ತರಳನ ತೊಟ್ಟಿಲ ತೂಗೀರೆ || ಸಿರಿದೇವಿ ರಮಣನೆ ಪುರಂದರ ವಿಠಲನೆ ಕರುಣದಿ ಮಲಗೆಂದು ತೂಗೀರೆ ||೫|| tUgIre raMgana tUgIre kRuShNana  tUgIre acyutaanaMtana |  tUgIre varagiriyappa timmappana  tUgIre kAvEri raMgayyana ||pa||   nAgalOkadalli nArAyaNa malagyAne | nAgakannikeyaru tUgIre | nAgavENiyaru n...

ಕುಣಿಕುಣಿಯೋ ರಂಗ | ಗೋಪಾಲ ವಿಠಲ | Kunikuniyo Ranga | Gopala Vithala

Image
  ಸಾಹಿತ್ಯ : ಶ್ರೀ ಗೋಪಾಲ ದಾಸರು (ಗೋಪಾಲ ವಿಠಲ) Kruti:Sri Gopala Dasaru (Gopala vittala) ಕುಣಿಕುಣಿಯೋ ರಂಗ ಕುಣಿ ಕುಣಿಯೋ ಕೃಷ್ಣ  ಫಣಿ ಫಣದಲಿ ಠಣ್ ಠಣ ಠಣಿರೆನ್ನುತ |ಪ| ಕಾಲ್ಗೆಜ್ಜೆ ಪೈಜಣ ಘಲ್ಲು ಘಲ್ಲೆನ್ನುತ ಉಡಿದಾರ ಉಡಿಗೆಜ್ಜೆ  ಝಣಿ ಝಣರೆನುತಾ ಕಿಣ್ ಝಣಿ ಝಣರೆನುತ|  ಕಾಳಿಂಗ ಸರ್ಪನ ಬಾಲ ಕಾಮನಯ್ಯ ಪಿಡಿದು  ಕಮಲನಾಭನು ತಾ ನಾಟ್ಯವನಾಡಿದ |೧| ಅಂದುಗೆಯಲುಗಲು ಮಾಗಾಯಿ ಉಲಿಯಲು  ಚಂದಾದಿ ಕಿರುಗೆಜ್ಜೆ ಝಣಕು ಝಣಕೆನಲು  ಧಂದಣ ಧಣಕೆಂದುಬೊಮ್ಮ ಮದ್ದಲೆ ಹೊಯ್ಯೆ|  ತಂದಾನ ತಾನಾ ಯೆಂದು ಹನುಮಂತ ಪಾಡಲು |೨| ಅಂಬರದಿ ಗಾನ ಪಾಡೆ ತುಂಬುರು ನಾರದರು  ರಂಭೆ ಊರ್ವಶಿಯರು ನಾಟ್ಯವನಾಡೆ| ತಾವು ನಾಟ್ಯವನಾಡೆ  ಸಂಭ್ರಮದಿ ಸ್ತ್ರೀಯರೆಲ್ಲ ವರದ ಗೋಪಾಲ ವಿಠಲಗೆ  ಮಂಗಳಾರುತಿಯ ಮಾಡೆ ಗಂಗ ಜನಕನಿಗೆ |೩| kuNikuNiyO raMga kuNi kuNiyO kRuShNa  PaNi PaNadali ThaN ThaNa ThaNirennuta |pa|   kAlgejje paijaNa Gallu Gallennuta uDidAra uDigejje  JaNi JaNarenutA kiN JaNi JaNarenuta|  kALiMga sarpana bAla kAmanayya piDidu  kamalanABanu tA nATyavanADida |1|   aMdugeyalugalu mAgAyi uliyalu  caMdAdi kirugejje JaNaku JaNakenalu  dhaMdaNa dhaNakeMdubo...

ಶ್ರೀ ಮನ್ನಾರು ಕೃಷ್ಣ ಸುಳಾದಿ | ವಿಜಯ ವಿಠಲ | Sri Mannaru Krishna Suladi | Sri Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಧ್ರುವತಾಳ ಬಾಲಾ ಗೋಪಾಲ ಗುಣಶೀಲಾ ವಿಶಾಲ ಮಹಿಮಾ ಕಾಲಾ ದೇಶತಃ ಪೂರ್ಣ ನೀಲವರ್ಣ ಕಾಳಿಂಗಮದಭಂಗ ಕಾಳಿಂದಿಯಾ ರಮಣ ಮೂಲಾವತಾರಾಭೇದ ಲೀಲಾ ವಿನೋದ ಏಳೇಳು ಲೋಕವ ಆಳುವ ಬಲುದೈವ ಪಾಲು ಮೊಸರು ಕದ್ದ ಲಾಲಾಸುರಿವ ಶುದ್ಧ ಆಳಿನ ಮನೋರಥ ಫಾಲಲೋಚನ ವಿನುತ ಬಾಲೆರ ಮಾನಭಂಗ ಮೌಳಿ ಮುಕುಟ ತುಂಗ ಲೋಲ ಮನ್ನಾರಿಗುಡಿ ಪಾಲಾ ವಿಜಯವಿಠಲ ಸೋಳಾಸಾಸಿರ ವಾಮಲೋಚನೇರ ಪ್ರೀಯಾ ಮಟ್ಟ ತಾಳ ಅರಿಧರ ಶಿರಿಧರ ಧರಾಧರ ಗಿರಿಧರ ಸುರಹರ ಸುರವರ ಮುರಹರ ನರವರ ಕರಿವರತ್ಪರಾತ್ಪರ ವಿಜಯವಿಠಲ ಪೀತಾಂ- ಬರಧರ ಧಾರ ನಿರುತರ ಪರಿಪೂರ್ಣ ಶಿರಿಮನ್ನಾರಾದಾ ವರನಿಲಯಾ ಕೃಷ್ಣಾ ತ್ರಿವಿಡಿ ತಾಳ ಋಷಿ ಹರಿತಾನೆಂಬಾಂಗೀರಸ ಕುಲದುದುಭವಾ ವಸುಧಿಯನು ಶೋಧಿಸಿಕೊಳುತ ಹಸನಾದ ನೆಲವೆ ಕಾಣಿಸದೆ ಇರಲು ತಾ ಪಸಿಗಾನು ಬಂದಿಲ್ಲಿ ನಸುನಗುತ ವಸುದೇವ ಸುತನ ಮೆಚ್ಚಿಸುವೆನೆಂದು ಮನಸು ವಶಮಾಡಿಕೊಂಡು ರಚಿಸಿದನು ತಪವನು ವಸುಮತೀಶ್ವರ ನಮ್ಮ ವಿಜಯವಿಠಲನ ಸ್ಮ- ರಿಸುತಲೀ ಪರಿಯಾ ದಿವಸ ಕಳೆಯುತಿರೆ ಅಟ್ಟತಾಳ ಮನ್ಯು ಅಧಿಕವಾದ ಮನ್ನಾಸುರ ದೈತ್ಯ ತನ್ನೆದುರಲಿ ಒಬ್ಬರನ್ನು ಕಾಣೆನೆಂದೂ ಉನ್ಮತ್ತದಿಂದ ಸನ್ನು ಮುನಿಯ ತಪ- ವನ್ನೆ ಕೆಡಿಸಲಾಗಿ ಖಿನ್ನ ಮನಸಿನಲ್ಲಿ ತನ್ನೊಳು ತಾನೆ ಕಾವನ್ನನಯ್ಯನ ಪಾದ- ವನ್ನು ನೆನೆಸಲು ಸನ್ನಿಧಿಯಾದನು ಅನಾಥರೊಡೆಯಾ ವಿಜಯವಿಠಲನು ಬಂದು ಮನ್ನಿಸಿದನು ಋಷಿ ಅನ್ನವಾದವನು ಆದಿತಾಳ ಮರುಳ ಮನ್ನಾಸುರನ ಒರೆಸಿ ಮುನಿಯ ಕಾಯ್ದ ಹರಿಪೆಸರಾದ...

ಇಂದು ನಿನ್ನ ಮೊರೆಯ ಹೊಕ್ಕೆ | ಪುರಂದರ ವಿಠಲ | Indu ninna Moreya Hokke | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಇಂದು ನಿನ್ನ ಮೊರೆಯ ಹೊಕ್ಕೆ ವೆಂಕಟೇಶನೇ | ಎಂದಿಗಾದರೆನ್ನ ಕಾಯೋ ಶ್ರೀನಿವಾಸನೇ ||ಪ|| ಶೇಷಗಿರಿಯ ವಾಸ ಶ್ರೀಶ ದೋಷ ರಹಿತನೇ || ಏಸು ದಿನಕು ನಿನ್ನ ಪಾದ ದಾಸನು ನಾನೇ || ಕ್ಲೇಶಗೈಸದಿರು ಎನ್ನ ಸ್ವಾಮಿಯು ನೀನೇ ||೧|| ಕಮಲನಯನ ಕಾಮ ಜನಕ ಕರುಣವಾರಿಧೇ | ರಮೆಯನಾಳ್ವ ಕಮಲನಾಭ ಹೇ ದಯಾನಿಧೇ || ಯಮನಪುರದಿ ಶಿಕ್ಷಿಸದಿರು ಪಾರ್ಥಸಾರಥೇ ||೨|| ಉರಗಶಯನ ಸುರರಿಗೊಡೆಯ ಸಿರಿಯ ರಮಣನೇ | ಶರಣ ಪಾಲ ಬಿರುದು ತೋರಿ ಪೊರೆವ ದೇವನೇ || ಕರುಣಿಸೆನಗೆ ಮುಕುತಿಯ ಪುರಂದರ ವಿಠಲನೇ ||೩|| iMdu ninna moreya hokke veMkaTESanE | eMdigAdarenna kAyO SrInivAsanE ||pa||   SEShagiriya vAsa SrISa dOSha rahitanE || Esu dinaku ninna pAda dAsanu nAnE || klESagaisadiru enna svAmiyu nInE ||1||   kamalanayana kAma janaka karuNavAridhE | rameyanALva kamalanABa hE dayAnidhE || yamanapuradi SikShisadiru pArthasArathE ||2||   uragaSayana surarigoDeya siriya ramaNanE | SaraNa pAla birudu tOri poreva dEvanE || karuNisenage mukutiya puraMdara viThalanE ||3||

ಭಾರವೇ ಭಾರತೀರಮಣ | ವಿಜಯ ವಿಠಲ | Bharave Bharati Ramana | Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಭಾರವೇ ಭಾರತೀರಮಣ ನಿನಗೆ ನಾ ||ಪ|| ಲಂಕಾನಾಥನ ಬಿಂಕವ ಮುರಿದು ಅಕಳಂಕ ಚರಿತನ ಕಿಂಕರನೆನಿಸಿದೆ  ಪಂಕಜಾಕ್ಷಿಗೆ ಅಂಕಿತದುಂಗುರವಿತ್ತೆ ಶಂಕೆ ಇಲ್ಲದೆ ನೀ ಲಂಕೆಯ ದಹಿಸಿದೆ ||೧|| ಸೋಮ ಕುಲದಿ ನಿಸ್ಸೀಮ ಮಹಿಮನೆನಿಸಿ ತಾಮಸ ಬಕನ ನಿರ್ಧೂಮ ಮಾಡಿದೆ ಕಾಮಿನಿ ಮೋಹಿಸೆ ಪ್ರೇಮದಿ ಸಲಹಿದೆ ತಾಮರಸಾಕ್ಷನ ಸೇವೆಯ ಮಾಡಿದೆ ||೨|| ವೇದವ್ಯಾಸರ ಪೂಜೆಯ ಮಾಡಿ ಮೋದದಿಂದ ಬಹು ವಾದಗಳಾಡಿ ಅಧಮ ಶಾಸ್ತ್ರಗಳ ಹೋಮವ ಮಾಡಿ ವಿಜಯ ವಿಠಲನ ಸೇವಕನೆನಿಸಿದೆ ||೩|| BAravE BAratIramaNa ninage nA ||pa||   laMkAnAthana biMkava muridu akaLaMka caritana kiMkaraneniside paMkajAkShige aMkitaduMguravitte SaMke illade nI laMkeya dahiside ||1||   sOma kuladi nissIma mahimanenisi tAmasa bakana nirdhUma mADide kAmini mOhise prEmadi salahide tAmarasAkShana seveya mADide ||2||   vEdavyAsara pUjeya mADi mOdadiMda bahu vAdagaLADi adhama SAstragaLa hOmava mADi vijaya viThalana sEvakaneniside ||3||

ಶ್ರೀ ಮಹಾಲಕ್ಷ್ಮೀಯ ಅಲಂಕರಿಸಿ | ಪುರಂದರ ವಿಠಲ | Sri Mahalakshmiya Alankarisi | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಶ್ರೀ ಮಹಾಲಕ್ಷ್ಮೀಯ ಅಲಂಕರಿಸಿ ಕರೆದರು | ಶ್ರೀ ಮಹಾಲಕ್ಷ್ಮೀಯ ||ಪ|| ಕೇಶವ ನಿಮ್ಮ ನಾಮ ಮಾಂಗಲ್ಯ ಸೂತ್ರ ತಾಳಿ | ನಾರಾಯಣ ನಿಮ್ಮ ನಾಮ ತಾಳಿ ಪದಕವು || ಮಾಧವ ನಿಮ್ಮ ನಾಮ ಸುರಗಿ ಸಂಪಿಗೆ ಮೊಗ್ಗು | ಗೋವಿಂದ ನಿಮ್ಮ ನಾಮ ಗೋಧಿಯ ಸರವು ||೧|| ವಿಷ್ಣುವೇ ನಿಮ್ಮ ನಾಮ ರತ್ನಕುಂಡಲಿಗಳು | ಮಧೂಸೂದನ ನಿಮ್ಮ ನಾಮ ಮಾಣಿಕ್ಯದ್ಹರಳು || ತ್ರಿವಿಕ್ರಮ ನಿಮ್ಮ ನಾಮ ವಂಕಿನಾಗುಮುರುಗವು || ವಾಮನ ನಿಮ್ಮ ನಾಮ ಓಲೆ ಏಕಾವಳಿಯು ||೨|| ಶ್ರೀಧರ ನಿಮ್ಮ ನಾಮ ಒಳ್ಳೆ ಮುತ್ತಿನಹಾರ | ಹೃಷಿಕೇಶ ನಿಮ್ಮ ನಾಮ ಕೂಡಿಗೆಜ್ಜೆಯು || ಪದ್ಮನಾಭ ನಿಮ್ಮ ನಾಮ ಮುತ್ತಿನಡ್ಡಿಕೆಯು | ದಾಮೋದರ ನಿಮ್ಮ ನಾಮ ರತ್ನಪದಕವು ||೩|| ಸಂಕರ್ಷಣ ನಿಮ್ಮ ನಾಮ ವಂಕಿ ತೋಳಾಯಿತು | ವಾಸುದೇವ ನಿಮ್ಮ ನಾಮ ಒಲಿದ ಚೂಡ || ಪ್ರದ್ಯುಮ್ನ ನಿಮ್ಮ ನಾಮ ಹಸ್ತ ಕಂಕಣ ಬಳೆ | ಅನಿರುದ್ಧ ನಿಮ್ಮ ನಾಮ ಮುಕುರ ಬುಲಾಕು ||೪|| ಪುರುಷೋತ್ತಮ ನಿಮ್ಮ ನಾಮ ಹೊಸ ಮುತ್ತಿನ ಮೂಗುತಿ | ಅಧೋಕ್ಷಜ ನಿಮ್ಮ ನಾಮ ಚಂದ್ರ ಸೂರ್ಯ || ನರಸಿಂಹ ನಿಮ್ಮ ನಾಮ ಚೌರಿ ರಾಗುಟಿಗೊಂಡ್ಯ | ಅಚ್ಯುತ ನಿಮ್ಮ ನಾಮ ಮುತ್ತಿನ ಬೊಟ್ಟು ||೫|| ಜನಾರ್ದನ ನಿಮ್ಮ ನಾಮ ಜರಿಯ ಪೀತಾಂಬರ | ಉಪೇಂದ್ರ ನಿಮ್ಮ ನಾಮ ಕಡಗ ಗೆಜ್ಜೆಯು || ಶ್ರೀ ಹರಿ ನಿಮ್ಮ ನಾಮ ಕಂಚು ವಂಕಿಯ ತುಳಸಿ | ಶ್ರೀ ಕೃಷ್ಣ ನಿಮ್ಮ ನಾಮ ನಡುವಿನೊಡ್ಯಾಣವು |...

ಇಷ್ಟುದಿನ ಭೂವೈಕುಂಠ | ಹಯವದನ | Ishtu Dina Bhuvaikuntha | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಇಷ್ಟುದಿನ ಭೂವೈಕುಂಠ ಎಷ್ಟುದೂರವೆನುತಿದ್ದೆ ದೃಷ್ಟಿಯಿಂದಲಿ ನಿಮ್ಮ ಕಂಡೆ ಸೃಷ್ಟಿಪತಿ ಶ್ರೀರಂಗೇಶ||ಪ|| ಚಿತ್ರಬೀದಿ ವಿರಾಜಿತ ಚಾರುನೂಪುರಶೋಭಿತ ಸಪ್ತಪ್ರಕಾರ ಸಂಪೃಷ್ಠ ಉತ್ತಮ ಶ್ರೀರಂಗಶಾಯಿ||೧|| ಹೇಮಕವಾಟಗಳಿಂದ ಹೇಮಸೋಪಾನಗಳಲ್ಲಿ ಹೇಮಕಟಾಂಜನದಿಂದ ಗುಣಶೋಭಿತ ಶ್ರೀರಂಗೇಶ ||೨|| ಚತುರ ವೇದಗಳಲ್ಲಿ ಚತುರಮೂರ್ತಿ ವೀರ್ಯದಲ್ಲಿ ಚತುರ ದಿಕ್ಕುಗಳಲ್ಲಿ ಚದುರ ಶ್ರೀರಾಮ ಶ್ರೀರಂಗಶಾಯಿ||೩|| ಪಂಕಜನಾಭನೆ ಏಸು ಪಾವನವೊ ನಿಮ್ಮ ದಿವ್ಯ ಕುಂಕುಮಾಂಕಿತಚರಣ ಪಂಕಜಾಕ್ಷ ಶ್ರೀರಂಗೇಶ ||೪|| ಪುಣ್ಯವಿದ್ಯಾದಯಾನಿಧೆ ಪನ್ನಗಶಾಯಿ ಶೋಭಿತ ಧನ್ಯ ಚಂದ್ರಪುಷ್ಕರಣ ಉನ್ನಂತ ಶ್ರೀಹಯವದನ ||೫|| iShTudina BUvaikuMTha eShTudooravenutidde dRuShTiyiMdali nimma kaMDe sRuShTipati shrIraMgEsha||pa|| chitrabIdi viraajita chaarunUpurashObhita saptaprakaara saMpRuShTha uttama shrIraMgashaayi||1|| hEmakavaaTagaLiMda hEmasOpaanagaLalli hEmakaTaaMjanadiMda guNashObhita shrIraMgEsha ||2|| chatura vEdagaLalli chaturamUrti vIryadalli chatura dikkugaLalli chadura shrIraama shrIraMgashaayi||3|| paMkajanaabhane Esu paavanavo nimma divya kuMkumaaMkitacharaNa paMkajaakSha shrIr...

ಭಜಿಪೆ ಸದಾ ಗುರುರಾಜರ | ನರಹರಿ ವಿಠಲ | Bhajipe Sada Gururaja | Narahari Vithala

Image
ಸಾಹಿತ್ಯ : ಶ್ರೀ ನರಹರಿ ವಿಠಲ ದಾಸರು  Kruti: Sri Narahari Vittala Dasaru  ಭಜಿಪೆ ಸದಾ ಗುರುರಾಜರ ಪಾದ ಭಜಿಪೆ ಸದಾ || ಪ || ಪರಮ ಸರಸ ಸುಧಾ ಪರಿಮಳ ಬೆರೆಸಿದ || ಅಪ || ನಂದನಂದನಾನಂದದಿ ನೋಡುವರನ ಒಂದೇ ಮನದಿ ನಾ ಗುರು ರಾಘವೇಂದ್ರರನ || ೧ || ಮೋದ ತೀರ್ಥಮತಾಬ್ಧಿ ಚಂದ್ರನ ಶ್ರೀ ಸುಧೀಂದ್ರ ಕರಕಮಲ ಸಂಜಾತರ || ೨ || ಸಿರಿ ನರಹರಿ ವಿಠ್ಠಲನು ಮುದದಿ ಪೊಳೆವ ಬೃಂದಾವನದಿ ವರ ಕೊಡುವ || ೩ || bhajipe sadaa gururaajara paada bhajipe sadaa || pa || parama sarasa sudhaa parimaLa beresida || apa || naMdanaMdanaanaMdadi nODuvarana oMdE manadi naa guru raaGavEMdrarana || 1 || mOda tIrthamataabdhi caMdrana shrI sudhIMdra karakamala saMjaatara || 2 || siri narahari viThThalanu mudadi poLeva bRuMdaavanadi vara koDuva || 3 ||

ಬೃಂದಾವನ ನೋಡಿರೋ | ಶ್ರೀ ವೆಂಕಟ ವಿಠಲ | Brundavana Nodiro | Sri Venkata Vittala

Image
ಸಾಹಿತ್ಯ : ಶ್ರೀ ವೆಂಕಟ ವಿಠಲ ದಾಸರು  Kruti: Sri Venkata Vittala Dasaru  ಬೃಂದಾವನ ನೋಡಿರೋ, ಗುರುಗಳ, ಯತಿಗಳ, ಮುನಿಗಳ, ರಾಘವೇಂದ್ರರ||ಪ|| ಬೃಂದಾವನ ನೋಡಿ ಆನಂದ ಮದವೇರಿ ಚಂದದಿ ದ್ವಾದಶ ಪುಂಡ್ರಾಂಕಿತಗೊಂಬ ಬೃಂದಾವನ ನೋಡಿರೋ ||ಅಪ|| ತುಂಗಭದ್ರಾ ನದಿಯ ತೀರದಿ ಇದ್ದ  ತುಂಗ ಮಂಟಪ ಮಧ್ಯದಿ ಶೃಂಗಾರ ತುಳಸಿ ಪದುಮಾಂಶ ಸರಗಳಿಂದ ಮಂಗಳಕರ ಮಹಾಮಹಿಮೆಯಿಂದೊಪ್ಪುವ ||೧|| ದೇಶ ದೇಶದಿ ತಿರುಗುತ ಇಲ್ಲಿಗೆ ಬಂದು  ವಾಸವಾಗಿ ಸೇವಿಪ ಭಾಷೆ ಕೊಟ್ಟಂದದಿ ಬಹುವಿಧ ವರಗಳ ಸೂಸುವ ಕರ ಮಹಾಮಹಿಮೆಯಿಂದೊಪ್ಪುವ ||೨|| ನಿತ್ಯಸನ್ನಿಧಿ ಸೇವಿಪ ಭಕ್ತರಿಗೆಲ್ಲ  ಮತ್ತಭೀಷ್ಟಗರೆವಾ ಸತ್ಯಾದಿ ಗುಣಸಿಂಧು ವೆಂಕಟವಿಠಲನ ನಿತ್ಯ ಸನ್ನಿಧಿಯಿಂದ ನಿರುತ ಪೂಜೆಯಗೊಂಬ || ೩ || bRuMdaavana nODirO, gurugaLa, yatigaLa, munigaLa, raaghavEMdrara||pa|| bRuMdaavana nODi aanaMda madavEri chaMdadi dwaadasha puMDraaMkitagoMba bRuMdaavana nODirO ||apa|| ,  tuMgabhadraa nadiya tIradi idda  tuMga maMTapa madhyadi shRuMgaara tuLasi padumaaMsha saragaLiMda maMgaLakara mahaamahimeyiMdoppuva ||1|| dEsha dEshadi tiruguta illige baMdu  vaasavaagi sEvipa bhaaShe koTTaMdadi bahuvidha varagaLa sUsuva kara mahaamahimeyiMdopp...

ರಾಯ ಬಾರೋ ತಂದೆ | ಜಗನ್ನಾಥ ವಿಠಲ | Raya Baaro Tande | Sri Jagannatha Dasaru

Image
ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha Dasaru (Jagannatha vittala) ರಾಯ ಬಾರೋ ತಂದೆ ತಾಯಿ ಬಾರೋ ನಮ್ಮನು ಕಾಯಿ ಬಾರೋ ||ಪ|| ಮಾಯಿಗಳ ಮರ್ದಿಸಿದ ರಾಘವೇಂದ್ರ ರಾಯ ಬಾರೋ ||ಅಪ|| ವಂದಿಪ ಜನರಿಗೆ ಮಂದಾರ ತರುವಂತೆ  ಕುಂದದಭೀಷ್ಟೆಯ ಕೊಡುತಿಪ್ಪ ರಾಯ ಬಾರೋ || ಕುಂದದಭೀಷ್ಟೆಯ ಕೊಡುತಿಪ್ಪ ಸುರಮುನಿ | ಮಂದನ ಮತಿಗೆ ರಾಘವೇಂದ್ರ ರಾಯ ಬಾರೋ ||೧|| ಆರು ಮೂರು ಏಳು ನಾಲ್ಕು ಎಂಟು ಗ್ರಂಥ ಸಾರಾರ್ಥ | ತೋರಿಸಿದಿ ಸರ್ವರಿಗೆ ನ್ಯಾಯದಿಂದ ರಾಯ ಬಾರೋ || ತೋರಿಸಿದಿ ಸರ್ವರಿಗೆ ನ್ಯಾಯದಿಂದಾ ಸರ್ವಜ್ಞ | ಸೂರಿಗಳರಸನೇ ರಾಘವೇಂದ್ರ ರಾಯಬಾರೋ ||೨|| ರಾಮ ಪದಾಂಬುಜ ಸದ್‌ಭೃಂಗ ಕೃಪಾಪಾಂಗ | ಭ್ರಾಮಕ ಜನರ ಮಾನಭಂಗಾ ರಾಯ ಬಾರೋ || ಭ್ರಾಮಕ ಜನರ ಮಾನಭಂಗಾ ಮಾಡೀದಾ | ಧೀಮಂತರೊಡೆಯನೆ ರಾಘವೇಂದ್ರಾ ರಾಯ ಬಾರೋ ||೩|| ಭಾಸುರ ಚರಿತನೆ ಭೂಸುರವಂದ್ಯನೆ | ಶ್ರೀ ಸುಧೀಂದ್ರರ ವರಪುತ್ರ ರಾಯಬಾರೋ | ಶ್ರೀ ಸುಧೀಂದ್ರರ ವರಪುತ್ರ ವರಯೋಗಿ | ದೇಶಿಕರೊಡೆಯನೆ ರಾಘವೇಂದ್ರ ರಾಯ ಬಾರೋ ||೪|| ಭೂತಳನಾಥನ ಭೀತಿಯಾ ಬಿಡಿಸಿದೆ | ಪ್ರೇತತ್ವ ಕಳೆದೆ ಮಹಿಷಿಯ ರಾಯ ಬಾರೋ || ಪ್ರೇತತ್ವ ಕಳೆದೆ ಮಹಿಷಿಯ ಮಹಾಮಹಿಮ ಜಗನ್ನಾಥ ವಿಠಲನ ಪ್ರೀತಿಪಾತ್ರ ||೫|| rAya bArO taMde tAyi bArO nammanu kAyi bArO ||pa||   mAyigaLa mardisida rAGavEMdra rAya bArO ||apa||   vaMdipa janarige maMdAra taruv...

ಶ್ರೀ ಹಯಗ್ರೀವ ದೇವರ ಸ್ತೋತ್ರ ಸುಳಾದಿ | ಶ್ರೀ ವಿಜಯ ದಾಸರು | Sri Hayagriva Stotra Suladi | Sri Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಶ್ರೀ ಹಯಗ್ರೀವ ದೇವರ ಸ್ತೋತ್ರ ಸುಳಾದಿ ಜಯ ಜಯ ಜಾನ್ಹವಿಜನಕ ಜಗದಾಧಾರ ಭಯನಿವಾರಣ ಭಕ್ತ ಫಲದಾಯಕ ದಯಪಯೋನಿಧಿ ಧರ್ಮಪಾಲ ದಾನವ ಕಾಲ- ತ್ರಯ ಹತ್ತೆಂಟು ಮೀರಿದ ತ್ರೈಲೋಕನಾಥ ಆ- ಶ್ರಯ ಸಂತರ ಕಾಮಧೇನು ಧೇನುಕ ಭಂಜ ವ್ಯಯದೂರ ವ್ಯಾಧಿಹರಣ ವ್ಯಾಪ್ತ ವ್ಯಾಕುಲಹಾರಿ ಪ್ರಿಯ ಪ್ರೇರಕ ಪ್ರಥಮ ಪ್ರಾಪ್ತಿ ಪ್ರಾಣ ಜಯದೇವಿರಮಣ ಜಯ ಜಯ ಜಯಾಕಾರ ಸುಯತಿಗಳ ಮನೋಹಾರ ಮಂದಹಾಸ ಚಂದ್ರೋ- ದಯ ಭಾಸ ಪೂರ್ಣಶಕ್ತಿ ಸರ್ವರೂಪ ತ್ರಯಕಾಯ ತತ್ವ ತತ್ವ ತದಾಕಾರ ಮೂರುತಿ ಕ್ರಿಯ ಗುಣಾನಂತ ರೂಪಾನಂತ ಏಕಾನೇಕ ಸಮಸ್ತ ಸಯವಾಗಿಪ್ಪ ಸಮ ಅಸಮ ದೈವಾ ಹಯಮೊಗ ವಾದಿರಾಜಗೊಲಿದ ವಿಜಯವಿಠ್ಠಲ ಪಯೋನಿಧಿ ಶಯನ ಸತ್ವನಿಯಾಮಕ ||೧||  ಶಶಿ ಮಂಡಲ ಮಂದಿರ ಮಧ್ಯದಲಿ ನಿತ್ಯ ಮಿಸುಣಿಪ ಶುಭಕಾಯಾ ಯೋಗಾಸನನಾಗಿ ಎಸುಳುಗಂಗಳ ಚೆಲುವ ಹುಂಕರಿಸುವನಾದ ಬಿಸಜಾಕ್ಷ ಪುಸ್ತಕ ಜ್ಞಾನಮುದ್ರಾ ಎಸೆವ ಚತುರಬಾಹು ಕೊರಳ ಕೌಸ್ತಭ ಮಾಲೆ ಶಶಿಮುಖಿಯರು ಒಲಿದು ಸೇವೆಮಾಡುತಲಿರೆ ಅಸುರರ ಕಾಳಗವ ಕೆಣಕುವ ಕಾಲ್ಗೆದರಿ ದಶದಿಶ ಕಂಪಿಸಲು ಖುರಪುಟದ ರಭಸ ಪುಸಿಯಲ್ಲ ನಮಗೆ ಪರದೇವತಿ ಇದೇ ಕುಶಮೊನೆ ಮನದಲ್ಲಿ ಧ್ಯಾನಮಾಡಲಿಬೇಕು ಹಸನಾಗಿ ಕೇಳಿ ಮುದದಿ ವಾದಿರಾಜಾ ಮಸಕರಿಗೆ ವಲಿದ ವಿಜಯವಿಠ್ಠಲರೇಯಾ ಕುಶಲವ ಕೊಡುವನು ಈ ಪರಿ ಕೊಂಡಾಡೆ||೨|| ನಾಶಿಕ ಪುಟದಿಂದ ಸರ್ವ ವೇದಾರ್ಥಂಗಳು ಶ್ವಾಸೋಚ್ಛ್ವಾಸದಿಂದ ಪೊರಡುತಿವಕೊ ಏಸು ಬಗೆ ನೋಡು ಇದೇ ಸೋಜಿಗವೆಲ್ಲಾ ಶ್ರೀಶನ್ನ ಸಮಸ...

ಹನುಮ ನಮ್ಮ ತಾಯಿ-ತಂದೆ | ಪುರಂದರ ವಿಠಲ | Hanuma namma Tayi Tande | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಹನುಮ ನಮ್ಮ ತಾಯಿ-ತಂದೆ, ಭೀಮ ನಮ್ಮಾ ಬಂಧು-ಬಳಗ,  ಆನಂದ ತೀರ್ಥರೆ ನಮ್ಮ ಗತಿಗೋತ್ರವಯ್ಯಾ ||ಪ|| ತಾಯಿತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆ  ಆಯಾಸವಿಲ್ಲದೆ ಸಂಜೀವನವ ತಂದೆ || ಗಾಯಗೊಂಡ ಕಪಿಗಳನ್ನು ಸಾಯದಂತೆ ಪೊರೆವ ರಘು ರಾಮನಂಘ್ರಿಗಳೇ ಸಾಕ್ಷಿ ತ್ರೇತಾಯುಗದಿ ||೧|| ಬಂಧು-ಬಳಗದಂತೆ ಆಪದ್ಬಾಂಧವನಾಗಿ ಪಾರ್ಥನಿಗೆ  ಬಂದ ದುರಿತಗಳ ಪರಿಹರಿಸಿ || ಅಂಧಕ ಜಾತರಕೊಂದು ನಂದಕಂದಾರ್ಪಣೆಯೆಂದ ಗೋ- ವಿಂದನಂಘ್ರಿಗಳೇ ಸಾಕ್ಷಿ ದ್ವಾಪರಯುಗದಿ ||೨|| ಗತಿಗೋತ್ರರಂತೆ ಸಾಧು ತತಿಗಳಿಗೆ ಮತಿಯ ತೋರಿ ಮತಿಗೆಟ್ಟ ಇಪ್ಪತ್ತೊಂದು ಮತವ ಖಂಡಿಸಿ || ಮತಿವಂತ ಸದ್ವೈಷ್ಣವರಿಗೆ ಸದ್ಗತಿ ತೋರಿದ ಪರಮಾತ್ಮ ಗತಿಗುರು ಪುರಂದರ ವಿಠಲನೇ ಸಾಕ್ಷಿ ಕಲಿಯುಗದಲ್ಲಿ ||೩|| hanuma namma tAyi-taMde, BIma nammA baMdhu-baLaga,  AnaMda tIrthare namma gatigOtravayyA ||pa||   tAyitaMde hasuLegAgi sahAya mADi sAkuvaMte  AyAsavillade saMjIvanava taMde || gAyagoMDa kapigaLannu sAyadaMte poreva raGu rAmanaMGrigaLE sAkShi trEtAyugadi ||1||   baMdhu-baLagadaMte ApadbAMdhavanAgi pArthanige  baMda duritagaLa pariharisi || aMdhaka jAt...

ಕರುಣಿಸಿ ಪೊರೆ ವರ ಮಹಲಕುಮಿಯೆ | ಪ್ರಸನ್ನ ವೆಂಕಟ | Karunisi Pore VaraMahalakumiye | Prasanna Venkata Dasaru

Image
ಸಾಹಿತ್ಯ : ಶ್ರೀ ಪ್ರಸನ್ನ ವೇಂಕಟ ದಾಸರು  Kruti: Sri Prasanna Venkata Dasaru ಕರುಣಿಸಿ ಪೊರೆ ವರ ಮಹಲಕುಮಿಯೆ ಹರಿ ಪದ ತೋರಿಸಿ ಸಿರಿ ಸುಖ ಹರಿಸಿ||ಪ|| ಮಂಗಳೆ ಮಹೋನ್ನತ ರಂಗನ ಸದನಳೆ ಅಂಗಜ ಜನಕನರ್ಧಾಂಗಿ ದಯದಲೆ||೧|| ಧನ ಧಾನ್ಯದಾಯಿನಿ ಅನ್ನಪೂರ್ಣ ಮಯಿ ಪನ್ನಗ ಶಯನನ ರಾಣಿ ಪಾವನಿ||೨|| ಸರ್ವಾಲಂಕಾರದಿಂ ಶೋಭಿಸುತಲಿ ಬಹು ನಿರ್ವಲ್ಮಿಕ ಹರಿ ಎಡ ಬಲದಲ್ಲಿಹೆ ||೩|| ಕೃತ್ತಿ ವಾಸಾದ್ಯರಿಂ ಸ್ತುತ್ಯೆ ನಿತ್ಯ ಮುಕ್ತೆ ಮಾತು ಲಾಲಿಸೆನ್ನ ಮಾತರೀಶ್ವ ಪ್ರಿಯೆ ||೪|| ವಾರುಧಿ ತನಯೆ ವರಾಗ್ರ ವದನಳೆ ಸಿರಿ ಪ್ರಸನ್ವೆಂಕಟ ರಾಯನ ಪ್ರೀಯಳೆ||೫|| karuNisi pore vara mahalakumiye hari pada tOrisi siri sukha harisi||pa|| maMgaLe mahOnnata raMgana sadanaLe aMgaja janakanardhaaMgi dayadale||1|| dhana dhaanyadaayini annapUrNa mayi pannaga shayanana raaNi paavani||2|| sarvaalaMkaaradiM shObhisutali bahu nirvalmika hari eDa baladallihe ||3|| kRutti vaasaadyariM stutye nitya mukte maatu laalisenna maatarIshwa priye ||4|| vaarudhi tanaye varaagra vadanaLe siri prasanveMkaTa raayana prIyaLe||5||  

ಹಣವೆ ನಿನ್ನಯ ಗುಣವೇನು | ಹಯವದನ | Hanave Ninnaya Gunavenu | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಹಣವೆ ನಿನ್ನಯ ಗುಣವೇನು ಬಣ್ಣಿಪೆನೊ  ||ಪ|| ಹಣವಿಲ್ಲದವನೊಬ್ಬ ಹೆಣವೆ ಸರಿ ಕಂಡ್ಯ ||ಅಪ|| ಬೆಲೆಯಾಗದವನೆಲ್ಲ ಬೆಲೆಯ ಮಾಡಿಸುವಿ ಎಲ್ಲ ವಸ್ತುಗಳನಿದ್ದಲ್ಲೆ ತರಿಸುವಿ ಕುಲಗೆಟ್ಟವರ ಸತ್ಕುಲಕೆ ಸೇರಿಸುವಿ ಹೊಲೆಯನಾದರೂ ತಂದೊಳಗಿರಿಸುವಿ   ||೧|| ಅಂಗನೆಯರ ಸಂಗ ಅತಿಶಯದಿ ಮಾಡಿಸುವಿ ಶೃಂಗಾರಾಭರಣಂಗಳ ಬೇಗ ತರಿಸುವಿ ಮಂಗನಾದರೂ ಅನಂಗನೆಂದೆನಿಸುವಿ ಕಂಗಳಿಲ್ಲದವಗೆ ಮಗಳ ಕೊಡಿಸುವಿ ||೨|| ಚರಣಕ್ಕೆ ಬಂದಂಥ ದುರಿತವನು ಬಿಡಿಸುವಿ ಸರುವರಿಗೆ ಶ್ರೇಷ್ಠನರನ ಮಾಡಿಸುವಿ ಅರಿಯದ ಶುಂಠನ ಅರಿತವನೆನಿಸುವಿ ಸಿರಿಹಯವದನನ ಸ್ಮರಣೆ ಮರೆಸುವಿ ||೩|| haNave ninnaya guNavEnu baNNipeno  ||pa|| haNavilladavanobba heNave sari kaMDya ||apa|| beleyaagadavanella beleya maaDisuvi ella vastugaLaniddalle tarisuvi kulageTTavara satkulake sErisuvi holeyanaadarU taMdoLagirisuvi   ||1|| aMganeyara saMga atiSayadi maaDisuvi SRuMgaaraabharaNaMgaLa bEga tarisuvi maMganaadarU anaMganeMdenisuvi kaMgaLilladavage magaLa koDisuvi ||2|| caraNakke baMdaMtha duritavanu biDisuvi saruvarige SrEShThanarana maaDisuvi ariyada SuMThana aritavanenis...

ಶ್ರೀರಂಗ ಬಾರನೆ | ಹಯವದನ | Sri Ranga Baarane | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಶ್ರೀರಂಗ ಬಾರನೆ ||ಪ|| ಕರೆದರಿಲ್ಲಿ ಬಾರನೆ ಕಾಂತೆ ಮುಖವತೋರನೆ ಮ- ಧುರ ಪುರದ ಅರಸನೆ ಕೂಡಿ ಎನ್ನ ರಮಿಸನೆ ||ಅಪ|| ಮುನಿಸುಮನದಲ್ಲಿಟ್ಟನೆ ಮೋಹವನ್ನು ಬಿಟ್ಟನೆ ಮನದಿ ಛಲವ ತೊಟ್ಟನೆ ಮನೆಗೆ ಬಾರದೆ ಬಿಟ್ಟನೆ ||೧|| ಎಂತು ನಂಬಿ ಇದ್ದನೆ ಎಂತು ಗುರುತು ಮರೆತನೆ ಪಂಥವ್ಯಾತಕೆ ಕಲಿತನೆ ಕಾಂತೇರ ಕೂಡಿ ಮೆರೆದನೆ ||೨|| ಸೋಳಸಾಸಿರ ಗೋಪಿಸಹಿತ ಜಲದಲಾಡಿ ಪೋದನೆ ಸೆಳೆದು ಒಬ್ಬಳ ಒಯ್ದನೆ ಚೆಲುವ ಹಯವದನನೆ ||೩|| shrIraMga baarane ||pa|| karedarilli baarane kaaMte mukhavatOrane ma- dhura purada arasane kUDi enna ramisane ||apa|| munisumanadalliTTane mOhavannu biTTane manadi Chalava toTTane manege baarade biTTane ||1|| eMtu naMbi iddane eMtu gurutu maretane paMthavyaatake kalitane kaaMtEra kUDi meredane ||2|| sOLasaasira gOpisahita jaladalaaDi pOdane seLedu obbaLa oydane cheluva hayavadanane ||3||

ರಜತಾದ್ರಿ ನಿಲಯನ | ಶ್ರೀ ಶ್ಯಾಮಸುಂದರ | Rajatadri nilayana | Sri Shyamasundara Dasaru

Image
ಸಾಹಿತ್ಯ : ಶ್ರೀ ಶ್ಯಾಮಸುಂದರ ದಾಸರು Kruti:Sri Shyamasundara Dasaru ರಜತಾದ್ರಿ ನಿಲಯನ  ರಜನೀಶಧರನ ತೋರೇ ಪಾರ್ವತಿಯೆ ||ಪ|| ಪಂಚಾನನ ಶಂಕರನ ಶ್ರೀಹರಿ  ಮಂಚಪದವಿ ಪಡೆದವನ ಪಂಚಬಾಣ ಮದಹರನ ಗುರು ವಿ- ರಿಂಚಿ ಕುಮಾರ ದೂರ್ವಾಸ ಶುಕನ ತೋರೆ ಪಾರ್ವತಿಯೇ ||೧|| ನಂದಿಸುಶ್ಯಂದನ ಶಿವನ ಗರ  ಕಂದರ ತ್ರಿಪುರಾಂತಕನ || ಮಂದಾಕಿನಿ ಧರ ಭವನ ಸುರ |  ವೃಂದ ವಿನುತ ನಗ ಚಾಪಧರನ ತೋರೆ ಪಾರ್ವತಿಯೇ ||೨|| ಸಾಮಜ ಚರ್ಮಾಂಬರನ ಶುಭ  ಕಾಮಿತ ಫಲದಾಯಕನ | ವಾಮದೇವ ಮುನಿಸುತನ ಶ್ರೀ ವರ- ಶ್ಯಾಮಸುಂದರನಾ ಪ್ರೇಮದ ಸಖನ ತೋರೇ ಪಾರ್ವತಿಯೇ ||೩|| rajataadri nilayana rajanIshadharana tOrE paarvatiye ||pa|| paMcaanana shaMkarana shrIhari  maMcapadavi paDedavana paMcabaaNa madaharana guru vi- riMci kumaara dUrvaasa shukana tOre paarvatiyE ||1|| naMdisushyaMdana shivana gara  kaMdara tripuraaMtakana || maMdaakini dhara bhavana sura |  vRuMda vinuta naga caapadharana tOre paarvatiyE ||2|| saamaja carmaaMbarana shubha  kaamita Paladaayakana | vaamadEva munisutana shrI vara- shyaamasuMdaranaa prEmada saKana tOrE paarvatiyE ||3||

ಅಜಾದಿ ಜಗದೊಡೆಯ | ವಿದ್ಯೇಶ ವಿಠಲ | Ajaadi Jagadodeya | Sri Vidyesha Teertharu

Image
ಸಾಹಿತ್ಯ  : ಶ್ರೀ ವಿದ್ಯೇಶ ತೀರ್ಥರು Kruti: Sri Vidyesha Teertharu ಅಜಾದಿ ಜಗದೊಡೆಯ ಅಜಾಂಡದಿ ಭಯಜನಕ ಅಜಾಬಂಧವ ಬಿಡಿಸೆನ್ನ ಆಜಾಮಿಳ ಕರುಣ  ||ಪ|| ಬಿಂಬಪೂಜಿಪ ಎನ್ನಲ್ಲಿ ಬಿಂಬಗ ಅಜಾದಿರೂಪದಿ ತುಂಬ ಸಾನ್ನಿಧ್ಯ ವಹಿಸಿ ಸಂಭಾವಿತನಾಗಿ ಸಲಹು ||೧|| ಮಮತಾಪಾಶದಲಿ ಸಿಲುಕಿ ಕುಮತಿ ಪ್ರೇರಿತ ಕರ್ಮಮಾಡಿ ಯಮನ ಮಾರ್ಗ ಪಿಡಿದ ಎನ್ನ ಸುಮತಿ ನೀಡಿ ಬಿಡಿಸು ಬೇಗ ||೨|| ಭಿನ್ನ ಕರ್ಮ ಬದ್ಧನಾದ  ಎನ್ನ ನೀ ಬಿಡಿಸದಿರೆ ನಿನ್ನ ಕರ್ಮಕಾಂಡದ ಸ್ಫೋಟ ಎನ್ನಿಂದ ವಿದ್ಯೇಶ ವಿಠಲ ||೩||  ajaadi jagadoDeya ajaaMDadi bhayajanaka ajAbaMdhava biDisenna AjaamiLa karuNa  ||pa|| biMbapUjipa ennalli biMbaga ajaadirUpadi tuMba saannidhya vahisi saMbhaavitanaagi salahu ||1|| mamataapaaSadali siluki kumati prErita karmamaaDi yamana maarga piDida enna sumati nIDi biDisu bEga ||2|| bhinna karma baddhanaada  enna nI biDisadire ninna karmakaaMDada sPOTa enniMda vidyESa viThala ||3||

ಪರದೇಶಿ ನೀನು ಸ್ವದೇಶಿ ನಾನು | ವಿಜಯ ವಿಠ್ಠಲ | Paradeshi Neenu Swadeshi Naanu | Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಪರದೇಶಿ ನೀನು ಸ್ವದೇಶಿ ನಾನು  ||ಪ|| ಪರಮ ಭಾಗವತರನು ಪೋಗಿ ಕೇಳೋಣ ||ಅಪ|| ಎನಗೆ ಜನಕನು ನೀನು ನಿನಗಾರು ಜನಕನೊ ಜನನಿ ಇಂದಿರೆದೇವಿ ನಿನಗಾವಳೊ ವನಜಪೀಠನು ಭ್ರಾತ ನಿನಗಾವ ಭ್ರಾತನೊ ಇನ ಸೋಮ ಮಾತುಳನು ನಿನಗಾವ ಮಾತುಳನೊ  ||೧|| ಸುರನದೀ ಅಗ್ರಜಳು ನಿನಗೆ ಅಗ್ರಜಳಾರು ಶರನಿಧಿ ಭಾವ ನಿನಗಾರೊ ಭಾವ ಸ್ಮರನು ಕಿರಿ ಸಹಭವನು ನಿನಗೆ ಸಹಭವನಾರೊ ಸುರರು ಬಂಧುಗಳೆನಗೆ ನಿನಗಾರು ಬಾಂಧವರೊ  ||೨|| ವರ ಇಳೆಯು ಸಹಮಾತೆ ನಿನಗೆ ಸಹಮಾತೆ ಯಾರೊ ಮರುತ ದೇವರೆ ಗುರುವು ನಿನಗಾರು ಗುರುವೊ ಸಿರಿಯರಸ ವಿಜಯವಿಠ್ಠಲರೇಯನೆ ನಿನ್ನ ಚರಣ ಸೇವಕ ನಾನು ನೀನಾರ ಸೇವಕನೊ  ||೩|| paradESi nInu svadEshi naanu  ||pa|| parama bhaagavataranu pOgi kELONa ||apa|| enage janakanu nInu ninagaaru janakano janani iMdiredEvi ninagaavaLo vanajapIThanu bhraata ninagaava bhraatano ina sOma maatuLanu ninagaava maatuLano  ||1|| suranadI agrajaLu ninage agrajaLaaru Saranidhi bhaava ninagaaro bhaava smaranu kiri sahabhavanu ninage sahabhavanaaro suraru baMdhugaLenage ninagaaru baaMdhavaro  ||2|| vara iLeyu sahamaate ninage sahamaate yaaro maruta dEvare guruvu n...

ಮುಂಜಾನೆ ಎದ್ದು ಸಂಜೀವನೆನ್ನಿ | ವಿಜಯ ವಿಠಲ | Munjane Eddu | Sri Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಮುಂಜಾನೆ ಎದ್ದು ಸಂಜೀವನೆನ್ನಿ ||ಪ|| ಅಂಜಿಪ ದುರಿತ ದೂರವೆನ್ನಿ ||ಅಪ|| ವಾಯು ನಂದನನೆನ್ನಿ ವಜ್ರಕಾಯನೆನ್ನಿ  ರಾಯ ರಾಘವನ ಕಿಂಕರನೆನ್ನಿ || ಛಾಯಾಗ್ರಿವನ ಕೊಂದು ವನವ ಕಿತ್ತಿದನೆನ್ನಿ,  ಮಾಯದ ಲಂಕೆಯ ದಹನನೆನ್ನಿ ||೧|| ಪಾಂಡು ನಂದನನೆನ್ನಿ, ಪಾಪ ಸಂಹರನೆನ್ನಿ,  ಉಂಡು ವಿಷವ ತೇಗಿದನೆನ್ನಿ || ಚಂಡ ಕುರುವಂಶ ಹತನೆನ್ನಿ,  ಲಂಡ ಹಿಡಂಬಕನ ಕೊಂದನೆನ್ನಿ ||೨|| ಆನಂದ ತೀರ್ಥರೆನ್ನಿ, ಅಮಿತ ಜೀವಾತ್ಮನೆನ್ನಿ,  ಜ್ಞಾನಕ್ಕೆ ಮೊದಲ ದೇವತೆಯೆನ್ನಿ || ಆನಂದ ಮಯನಾದ ವಿಜಯ ವಿಠಲನ  ಧ್ಯಾನಿಪ ಜನರಿಗೆ ಮಾರ್ಗನೆನ್ನಿ ||೩|| muMjAne eddu saMjIvanenni ||pa|| aMjipa durita dUravenni ||apa||   vAyu naMdananenni vajrakAyanenni  rAya rAGavana kiMkaranenni || CAyAgrivana koMdu vanava kittidanenni,  mAyada laMkeya dahananenni ||1||   pAMDu naMdananenni, pApa saMharanenni,  uMDu viShava tEgidanenni || caMDa kuruvaMSa hatanenni,  laMDa hiDaMbakana koMdanenni ||2||   AnaMda tIrtharenni, amita jIvAtmanenni,  j~jAnakke modala dEvateyenni || AnaMda mayanAda vijaya viThalana  dhyAnipa ja...

ಏನು ಮರುಳಾದೆಯಮ್ಮ | ಪುರಂದರ ವಿಠಲ | Enu Maruladeyamma | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಏನು ಮರುಳಾದೆಯಮ್ಮ ಎಲೆ ರುಕ್ಮಿಣಿ ||ಪ|| ಹೀನಕುಲದ ಗೊಲ್ಲ ಶ್ರೀಗೋಪಾಲಕೃಷ್ಣನಿಗೆ ||ಅಪ|| ಹಾಸಿಕಿಲ್ಲದೆ ಹಾವಿನ ಮೇಲೆ ಒರಗಿದವನ ಹೇಸಿಕಿಲ್ಲದೆ ಕರಡಿಯ ಕೂಡಿದವನ  ಗ್ರಾಸಕಿಲ್ಲದೆ ತೊತ್ತಿನ ಮಗನ ಮನೆಲುಂಡ ದೋಷಕಂಜದೆ ಮಾವನ ಶಿರವ ತರಿದವಗೆ ||೧|| ಕುಂಡಗೋಳಕರ ಮನೆ ಕುಲದೈವನೆನಿಸಿದಗೆ ಮಂಡೆಬೋಳರ ಮನಕೆ ಮನದೈವವ ಹಿಂಡುಗೊಲ್ಲರ ಮನೆಯ ಹಿರಿಯನೆಂದೆನಿಸುವ ಭಂಡಾಟದ ಗೊಲ್ಲ ಈ ಬಳಗದೊಳಗೆಲ್ಲ ||೨|| ಒಬ್ಬರಲಿ ಹುಟ್ಟಿ ಒಬ್ಬರಲಿ ಬೆಳೆದ ಒಬ್ಬರಿಗೆ ಮಗನಲ್ಲ ಜಗದೊಳಗೆಲ್ಲ ಅಬ್ಬರದ ದೈವ ಶ್ರೀಪುರಂದರವಿಠಲನ ಉಬ್ಬುಬ್ಬಿ ಮದುವ್ಯಾದಿ ಉತ್ಸಾಹದಿಂದ ||೩|| Enu maruLaadeyamma ele rukmiNi ||pa|| hInakulada golla SrIgOpaalakRuShNanige ||apa|| haasikillade haavina mEle oragidavana hEsikillade karaDiya kUDidavana  graasakillade tottina magana maneluMDa dOShakaMjade maavana Sirava taridavage ||1|| kuMDagOLakara mane kuladaivanenisidage maMDebOLara manake manadaivava hiMDugollara maneya hiriyaneMdenisuva bhaMDATada golla I baLagadoLagella ||2|| obbarali huTTi obbarali beLeda obbarige maganalla jagadoLagella abbarada dai...

ವ್ಯರ್ಥವಲ್ಲವೆ ಜನ್ಮ | ಪುರಂದರ ವಿಠಲ | Vyarthavallave Janma | Sri Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ ||ಪ|| ಅರ್ಥಿಯಿಂದ ಹರಿಯ ನಾಮ ನಿತ್ಯ ಸ್ಮರಿಸದವನ ಜನ್ಮ ||ಅಪ|| ಹರಿಯ ಸೇವೆ ಮಾಡದವನ | ಹರಿಯ ಗುಣಗಳೆಣಿಸದವನ || ಹರಿಯ ಕೊಂಡಾಡದವನ | ಹರಿಯ ತಿಳಿಯದವನ ಜನ್ಮ ||೧|| ದಾಸರೊಡನೆ ಆಡದವನ | ದಾಸರೊಡನೆ ಪಾಡದವನ | ದಾಸರ ಕೊಂಡಾಡದೆ ಹರಿ | ದಾಸನಾಗದವನ ಜನ್ಮ ||೨|| ಒಂದು ಶಂಖ ಉದಕ ತಂದು | ಚಂದದಿಂದ ಹರಿಗರ್ಪಿಸಿ | ತಂದೆ ಪುರಂದರ ವಿಠಲನ ಪೊಂದಿ | ನೆನೆಯದವನ ಜನ್ಮ ||೩|| vyarthavallave janma vyarthavallave ||pa|| arthiyiMda hariya nAma nitya smarisadavana janma ||apa||   hariya sEve mADadavana | hariya guNagaLeNisadavana || hariya koMDADadavana | hariya tiLiyadavana janma ||1|| dAsaroDane ADadavana | dAsaroDane pADadavana | dAsara koMDADade hari | dAsanAgadavana janma ||2||   oMdu SaMKa udaka taMdu | caMdadiMda harigarpisi | taMde puraMdara viThalana poMdi | neneyadavana janma ||3||

ನಂದನಂದನ ಪಾಹಿ | ರಂಗವಿಠಲ | Nanda nandana pahi | Sri Sripadarajaru

Image
ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ) Kruti: Sri Sripadarajaru (Ranga vittala) ನಂದನಂದನ ಪಾಹಿ ಗುಣವೃಂದ  ಸುಂದರ ರೂಪ ಗೋವಿಂದ ಮುಕುಂದ ||ಪ|| ದಿನಕರ ಭವಪಾಲ ಕನಕಾಂಕಿತ ಚೇಲ ಜನಕಜಾಲೋಲ ಜನಕಾನುಕೂಲ   ||೧|| ಪವನಜ ಪರಿವಾರ ಯವನವಿದಾರ ನವರತ್ನಹಾರ ನವನೀತಚೋರ ||೨|| ತುಂಗ ವಿಹಂಗತುರಂಗ ದಯಾಪಾಂಗ  ರಂಗವಿಠಲ ಭವಭಂಗ ಶುಭಾಂಗ ||೩|| naMdanaMdana paahi guNavRuMda  suMdara rUpa gOviMda mukuMda ||pa|| dinakara bhavapaala kanakaaMkita cEla janakajaalOla janakaanukUla   ||1|| pavanaja parivaara yavanavidaara navaratnahaara navanItacOra ||2|| tuMga vihaMgaturaMga dayaapaaMga  raMgaviThala bhavabhaMga SuBaaMga ||3||

ಹರಿನಾರಾಯಣ ಹರಿನಾರಾಯಣ | ಪುರಂದರ ವಿಠಲ | Hari Narayana Hari Narayana | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಹರಿನಾರಾಯಣ ಹರಿನಾರಾಯಣ ಹರಿನಾರಾಯಣ ಎನು ಮನವೆ ||ಪ|| ನಾರಾಯಣನೆಂಬ ನಾಮದ ಬೀಜವ ನಾರದ ಬಿತ್ತಿದ ಧರೆಯೊಳಗೆ ||ಅಪ|| ತರಳ ಧ್ರುವನಿಂದ ಅಂಕುರಿಸಿತು ಅದು ವರಪ್ರಹ್ಲಾದನಿಂದ ಮೊಳಕೆ ಆಯ್ತು ಧರಣೀಶ ರುಕ್ಮಾಂಗದನಿಂದ ಚಿಗುರಿತು ಕುರುಪಿತಾಮಹನಿಂದ ಹೂವಾಯ್ತು ||೧|| ವಿಜಯನ ಸತಿಯಿಂದ ಕಾಯಾಯಿತು ಅದು ಗಜರಾಜನಿಂದ ದೋರೆ ಹಣ್ಣಾಯ್ತು ದ್ವಿಜ ಶುಕಮುನಿಯಿಂದ ಫಲ ಪಕ್ವವಾಯಿತು ಅಜಮಿಳ ತಾನುಂಡು ರಸ ಸವಿದ ||೨|| ಕಾಮಿತ ಫಲವೀವ ನಾಮವೊಂದಿರಲಿಕೆ ಹೋಮ ನೇಮ ಜಪತಪವೇಕೆ ಸ್ವಾಮಿ ಶ್ರೀಪುರಂದರವಿಠಲನ ನಾಮವ ನೇಮದಿಂದಲಿ ನೀ ನೆನೆ ಮನವೆ ||೩|| harinaaraayaNa harinaaraayaNa harinaaraayaNa enu manave ||pa|| naaraayaNaneMba naamada bIjava naarada bittida dhareyoLage ||apa|| taraLa dhruvaniMda aMkurisitu adu varaprahlaadaniMda moLake aaytu dharaNIsha rukmaaMgadaniMda ciguritu kurupitaamahaniMda hUvaaytu ||1|| vijayana satiyiMda kaayaayitu adu gajaraajaniMda dOre haNNAytu dvija SukamuniyiMda Pala pakvavaayitu ajamiLa taanuMDu rasa savida ||2|| kaamita PalavIva naamavoMdiralike hOma nEma japatapavEke svaami SrIpuraM...

ನಾಡಮಾತು ಬೇಡ ನಾಲಿಗೆ | ಪುರಂದರ ವಿಠಲ | Nadamatu beda Nalige | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ನಾಡಮಾತು ಬೇಡ ನಾಲಿಗೆ ನಿನ್ನ  ಬೇಡಿಕೊಂಬೆನು ಕಂಡ್ಯ ನಾಲಿಗೆ ರೂಢಿಗೆ ಶ್ರೀಹರಿ ಕೈವಲ್ಯದಾರಿಯ  ನಾಮವ ನೆನೆ ಕಂಡ್ಯ ನಾಲಿಗೆ ||ಪ|| ಹಾಸ ಹೊತ್ತಾರೆದ್ದು ನಾಲಿಗೆ ಶ್ರೀನಿ- ವಾಸನ ನೆನೆ ಕಂಡ್ಯ ನಾಲಿಗೆ  ಶಕ್ತಿಯಂತೆ ನೀನು ಮತ್ತೆ ಬೊಗಳದಿರು  ಸತ್ಹಾಂಗಿರು ಕಂಡ್ಯ ನಾಲಿಗೆ ||ಅಪ|| ಉಂಬೋದು ಉಡುವೋದು ನಾಲಿಗೆ  ಬಹು ತಲಿಬಿಲಿಗೊಂಡೆ ನೀ ನಾಲಿಗೆ ಮುಂದೆ ಕಾಣದೆ ಹೋಗಿ ಬಂದು  ಜಗಕ್ಕೆ ತಂದು ನಿಲ್ಲಿಸಿದೆ ನಾಲಿಗೆ ||೧|| ಅತ್ತೆ ಮಾವನ ಬೈವ ನಾಲಿಗೆ ಇದು ಮತ್ತೆ ಗಂಡನ ಬೈವ ನಾಲಿಗೆ ಸುತ್ತುಮುತ್ತರದಿಂದ ದೇವ ಬ್ರಹ್ಮರ ಬೈವ  ನಾಯ್ಹಾಗಿರು ಕಂಡ್ಯ ನಾಲಿಗೆ ||೨|| ರಸ ಬಾಯಾರುಂಬೋದು ನಾಲಿಗೆ ಶ್ರೀನಿವಾಸನ ನೆನೆ ಕಂಡ್ಯ ನಾಲಿಗೆ ಪೊಡವಿಯೊಡೆಯ ಎನ್ನ ಪುರಂದರವಿಠಲನ್ನ ನಾಮವ ನೆನೆ ಕಂಡ್ಯ ನಾಲಿಗೆ ||೩|| naaDamaatu bEDa naalige ninna  bEDikoMbenu kaMDya naalige rUDhige SrIhari kaivalyadaariya  naamava nene kaMDya naalige ||pa|| haasa hottaareddu naalige SrIni- vaasana nene kaMDya naalige  shaktiyaMte nInu matte bogaLadiru  sat~haaMgiru kaMDya naalige ||apa|| uMbOdu uDuvOdu naalige  bahu talibi...

ಸಿಂಹರೂಪನಾದ ಶ್ರೀಹರಿ | ಪುರಂದರ ವಿಠಲ | Simharoopanada Srihari | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಸಿಂಹರೂಪನಾದ ಶ್ರೀಹರಿ  ಶ್ರೀ ನಾಮ ಗಿರೀಶನು ||ಪ|| ಒಮ್ಮನದಿಂದಲಿ ನಿಮ್ಮನು ಭಜಿಸಲು  ಸಮ್ಮತದಿಂದಲಿ ಕಾಯ್ವೆನೆಂಬ ಹರಿ ||ಅಪ|| ತರಳನು ಕರೆಯೆ ಸ್ತಂಭವ ಬಿರಿಯೇ | ತುಂಬ ಉಗ್ರವನು ತೋರಿದನು || ಬಗೆದನು ಕರುಳನು ಕೊರಳೊಳಗಿಟ್ಟನು | ತರಳನ ಸಲಹಿದ ಶ್ರೀ ನರಸಿಂಹ ||೧|| ಭಕ್ತರೆಲ್ಲ ಕೂಡಿ ಬಹುದೂರ ಓಡಿ  ಪರಮ ಶಾಂತವನು ಬೇಡಿದರು ಕರೆದರು ಸಿರಿಯನು ತೊಡೆಯೊಳಗಿರಿಸಿದ | ಪರಮ ಹರುಷವನು ಪೊಂದಿದ ಶ್ರೀ ಹರಿ ||೨|| ಜಯ ಜಯ ಜಯ ಎಂದು ಹೂವನು ತಂದು ಹರಿ ಹರಿ ಹರಿ ಎಂದು ಸುರರೆಲ್ಲ ಸುರಿಯೆ ಭಯ ನಿವಾರಣ ಭಾಗ್ಯ ಸ್ವರೂಪನೆ  ಪರಮ ಪುರುಷ ಶ್ರೀ ಪುರಂದರ ವಿಠಲ ||೩|| siMharUpanAda SrIhari  SrI nAma girISanu ||pa||   ommanadiMdali nimmanu Bajisalu  sammatadiMdali kAyveneMba hari ||apa||   taraLanu kareye staMBava biriyE | tuMba ugravanu tOridanu || bagedanu karuLanu koraLoLagiTTanu | taraLana salahida SrI narasiMha ||1||   Baktarella kUDi bahudUra ODi  parama SAMtavanu bEDidaru karedaru siriyanu toDeyoLagirisida | parama haruShavanu poMdida SrI hari ||2||   jaya jaya jay...

ಹನುಮಂತ ಪಾಹಿ ಹನುಮಂತ | ಶ್ಯಾಮ ಸುಂದರ ವಿಠಲ | Hanumantha Pahi Hanumantha | Syama Sundara Vithala

Image
ಸಾಹಿತ್ಯ : ಶ್ರೀ ಶ್ಯಾಮಸುಂದರ ದಾಸರು Kruti: Sri Shyamasundara Dasaru ಹನುಮಂತ ಪಾಹಿ ಹನುಮಂತ ||ಪ|| ಮುನಿವ್ಯಾಸ ಕರಕಮಲಾರ್ಚಿತ ಜಯವಂತ ||ಅಪ|| ಭೂಲೋಲಕೋಲಜ ಕೂಲ ಸುಮಂದಿರ  ಫಾಲಾಕ್ಷ ಪೌಲೋಮಿ ಪತಿವಂದಿತ || ಕಾಲಕಾಲದಿ ನಿನ್ನ ಓಲೈಸುವರ ಸಂಗ  ಪಾಲಿಸು ಕರುಣದಿ ಕಾಳೀ ಮನೋಹರ ||೧|| ಬಾಣರೂಪನೆ ಪಂಚಬಾಣ ನಿರ್ಜಿತನೇ ಷಟ್- ಕೋಣ ಮಧ್ಯದಿ ಬಂದು ನೀ ನೆಲೆಸಿ || ಕ್ಷೋಣಿ ಗೀರ್ವಾಣ ಸುಶ್ರೇಣಿಯಿಂದರ್ಚನೆ  ಮಾಣದೆ ಕೈಗೊಂಬ ವಾಣೀಶ ಸ್ಥಾನಾರ್ಹ ||೨|| ಸಿಂಧುಬಂಧನ ಶ್ಯಾಮ ಸುಂದರ ವಿಠಲನ  ದ್ವಂದ್ವಪಾದಾರವಿಂದಕೆ ಮಧುಪ || ಎಂದೆನಿಸಿದ ಗುರು ಗಂಧವಾಹನ ನಿನಗೆ  ವಂದಿಸುವೆನು ಭವ ಬಂಧ ಬಿಡಿಸಿ ಕಾಯೋ ||೩|| hanumaMta pAhi hanumaMta ||pa||   munivyAsa karakamalArcita jayavaMta ||apa||   BUlOlakOlaja kUla sumaMdira  PAlAkSha paulOmi pativaMdita || kAlakAladi ninna Olaisuvara saMga  pAlisu karuNadi kALI manOhara ||1||   bANarUpane paMcabANa nirjitanE ShaT- kONa madhyadi baMdu nI nelesi || kShONi gIrvANa suSrENiyiMdarcane  mANade kaigoMba vANISa sthAnArha ||2||   siMdhubaMdhana SyAma suMdara viThalana  dvaMdvapAdAraviMdake madhupa || eMdenisida guru gaMdh...

ನೀ ದಯ ಮಾಳ್ಪನು | ಶ್ರೀ ವೇಂಕಟ ವಿಠಲ | Ni Daya Malpanu | Sri Venkata Vittala Dasaru

Image
ಸಾಹಿತ್ಯ : ಶ್ರೀ ವೇಂಕಟ ವಿಠಲ ದಾಸರು  Kruti:Sri Venkata Vittala Dasaru ನೀ ದಯ ಮಾಳ್ಪನು ನಿರ್ದಯನಾದರೆ ಯಾರಿಗೆ ಮೊರೆಯಿಡಲಿ ||ಪ|| ಧೀರನು ನೀನು ಉದಾರನು ನೀನು  ತಾರಕ ಪರಬ್ರಹ್ಮ || ಬಾರಿ ಬಾರಿಗೂ ನಿನ್ನ ಕೋರಿ ಭಜಿಸುವೆನು | ಪಾರುಗಾಣಿಸೋ ಅಪಾರ ಮಹಿಮ ದೊರೆ ||೧|| ಎನ್ನನುದ್ಧರಿಸುವ ಘನ್ನ ಮಹಿಮನು ಪ್ರ- ಸನ್ನ ವದನ ನೀನೇ | ನಿನ್ನ ಚಿತ್ತದಲಿನ್ನು ತೋರದಿದ್ದರೆ ಸರಿ | ಎನ್ನ ದೌರ್ಭಾಗ್ಯವಿದು ಪನ್ನಂಗ ಶಯನನೇ ||೨|| ಪಂಕಜನಯನ ಮೀನಾಂಕ ಜನಕ  ಓಂಕಾರ ಮೂರ್ತಿ ನೀನೇ |  ಕಿಂಕರರಿಗೆ ಬಂದ ಸಂಕಟ ಕಳೆಯೈ | ಶಂಕರ ವಿನುತ ಶ್ರೀ ವೇಂಕಟ ವಿಠಲ ||೩|| nI daya mALpanu nirdayanAdare yArige moreyiDali ||pa||   dhIranu nInu udAranu nInu  tAraka parabrahma || bAri bArigU ninna kOri Bajisuvenu | pArugANisO apAra mahima dore ||1||   ennanuddharisuva Ganna mahimanu pra- sanna vadana nInE | ninna cittadalinnu tOradiddare sari | enna daurBAgyavidu pannaMga SayananE ||2||   paMkajanayana mInAMka janaka  OMkAra mUrti nInE |  kiMkararige baMda saMkaTa kaLeyai | SaMkara vinuta SrI vEMkaTa viThala ||3||

ಕಾಡ ಬೆಳದಿಂಗಳು | ರಂಗವಿಠಲ | Kaada Beladingalu | ಶ್ರೀ ಶ್ರೀಪಾದರಾಜರು

Image
ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ) Kruti: Sri Sripadarajaru (Ranga vittala) ಕಾಡ ಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು ||ಪ|| ಸತ್ಯಕ್ಕೆ ಧರ್ಮನು ಲೆತ್ತವನಾಡಲು  ಅರ್ಥ ಭಾಂಡರವೆಲ್ಲವ ಸೋತು ಮತ್ತೆ ವಿರಾಟರಾಯನ ಮನೆಯಲ್ಲಿ ತೊತ್ತಾದಳು ದ್ರೌಪದಿ ಒಂದು ವರುಷ ||೧|| ಪುಂಡರೀಕಾಕ್ಷ ಪುರುಷೋತ್ತಮ ಹರಿಯು ಬಂಡಿಬೋವನಾದ ಪಾರ್ಥನಿಗೆ ಭೂ- ಮಂಡಲನಾಳುವ ಹರಿಶ್ಚಂದ್ರರಾಯನು ಕೊಂಡವ ಕಾಯ್ದನು ಹೊಲೆಯನಾಳಾಗಿ ||೨|| ಉಂಟಾದ ಕಾಲಕ್ಕೆ ನೆಂಟರು ಇಷ್ಟರು ಬಂಟರಾಗಿ ಬಂದು ಬಾಗಿಲ ಕಾಯ್ವರು ಉಂಟಾದತನ ತಪ್ಪಿ ಬಡತನ ಬಂದರೆ ಒಂಟೆಯಂತೆ ಗೋಣ ಮೇಲೆತ್ತುವರು ||೩|| ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ ಬೆಂಬಲದಲಿ ನಲಿನಲಿವುತಿಹರು ಬೆಂಬಲತನ ತಪ್ಪಿ ಬಡತನ ಬಂದರೆ ಇಂಬು ನಿನಗಿಲ್ಲ ನಡೆಯೆಂಬರು ||೪|| ಏರುವ ದಂಡಿಗೆ ನೂರಾಳು ಮಂದಿಯು ಮೂರು ದಿನದ ಭಾಗ್ಯ ಝಣಝಣವು ನೂರಾರು ಸಾವಿರ ದಂಡವ ತೆತ್ತರೆ ರಂಗವಿಠಲನೆ ಸರಿಯೆಂಬೋರಯ್ಯ ||೫|| kaaDa beLadiMgaLu I saMsaara kattale beLadiMgaLu ||pa|| satyakke dharmanu lettavanaaDalu  artha bhaaMDaravellava sOtu matte viraaTaraayana maneyalli tottaadaLu draupadi oMdu varuSha ||1|| puMDarIkaakSha puruShOttama hariyu baMDibOvanaada paarthanige bhU- maMDalanaaLuva hariScaMdraraayanu koMDava kaaydanu holeyanaaLaagi ||...

ಕಂಡು ಧನ್ಯನಾದೆ | ಕಮಲೇಶ ವಿಠಲ | Kandu Dhanyanade | Kamalesha Vithala

Image
ಸಾಹಿತ್ಯ : ಶ್ರೀ ಕಮಲೇಶ ವಿಠಲ ದಾಸರು Kruti:Sri Kamalesha Vittala Dasaru ಕಂಡು ಧನ್ಯನಾದೆ ನಾನು ಉಡುಪಿ ಕೃಷ್ಣನ | ಗೋಪಾಲ ಕೃಷ್ಣನ ||ಪ|| ಕಂಡು ಧನ್ಯನಾದೆ ನಾ ಬ್ರಹ್ಮಾಂಡ ನಖದಿಂದೊಡೆದ ಹರಿಯ | ತಂಡ ತಂಡದಿ ಪೂಜೆಗೊಂಡು ಪಾಂಡವರನು ಸಲಹಿದಾತನ ||ಅ.ಪ|| ಎಂಟು ಮಠದ ಯತಿಗಳು ತನ್ನ ಭಂಟರೆಂದು ಪೂಜೆಗೊಂಬ | ಕಂಟಕ ಕಂಸಾದಿಗಳನು ದಂಟು ಮಾಡಿ ಸೀಳಿದಾತನ ||೧|| ಗೆಜ್ಜೆ ಕಾಲ್ಕಡಗ ನಾಟ್ಯ ಮಜ್ಜಿಗೆ ಕಡಗೋಲು ಪಿಡಿದು ಹೆಜ್ಜೆ ಪಂಕ್ತಿಯಲ್ಲಿ ಉಂಡು ಗುಜ್ಜು ವೇಷ ಧರಿಸಿದಾತನ ||೨|| ಏಸು ಜನ್ಮದ ಸುಕೃತವೋ ಕಮಲೇಶ ವಿಠಲ ರಾಯ | ನಿನ್ನ ದಾಸ ಜನರ ಅಭೀಷ್ಟವಿತ್ತು ಕೂಸಿನಂದದಿ ಸಲಹಬೇಕು ||೩|| kaMDu dhanyanAde nAnu uDupi kRuShNana | gOpAla kRuShNana ||pa||   kaMDu dhanyanAde nA brahmAMDa naKadiMdoDeda hariya | taMDa taMDadi pUjegoMDu pAMDavaranu salahidAtana ||a.pa||   eMTu maThada yatigaLu tanna BaMTareMdu pUjegoMba | kaMTaka kaMsAdigaLanu daMTu mADi sILidAtana ||1||   gejje kAlkaDaga nATya majjige kaDagOlu piDidu hejje paMktiyalli uMDu gujju vESha dharisidAtana ||2||   Esu janmada sukRutavO kamalESa viThala rAya | ninna dAsa janara aBIShTavittu kUsinaMdadi salahabEku ||3||

ನಮೋ ನಮೋ ಗಣೇಶ | ಮಹಿಪತಿ ಸುತಪ್ರಭು | Namo Namo Ganesha | Mahipati Suta Prabhu

Image
ಸಾಹಿತ್ಯ : ಶ್ರೀ ಮಹಿಪತಿಸುತ ದಾಸರು  Kruti:Sri Mahipatisuta Dasaru ನಮೋ ನಮೋ ಗಣೇಶ ನಮೋ ನಮೋ ಸಂಕಟನಾಶ ||ಪ|| ಸಿಂಧುಧರ ಚರ್ಚಿತ ಸಿಂಧೂರವದನ  ಸುಂದರ ಗುಣಸದನ ||೧|| ತ್ರಿಶೂಲ ಅಂಕುಶ ದೃತಕರ ಕರುಣಾ  ಕಿಸಲಯೋಪಮ ಚರಣ ||೨|| ಮಹಿಪತಿ ಸುತಪ್ರಭು ವಿಮಲೇಕದಂತ  ಇಹಪರ ಸುಖದಾತ ||೩|| namO namO gaNEsha namO namO saMkaTanaasha ||pa|| siMdhudhara carcita siMdhUravadana  suMdara guNasadana ||1|| trishUla aMkusha dRutakara karuNaa  kisalayOpama caraNa ||2|| mahipati sutaprabhu vimalEkadaMta  ihapara suKadaata ||3||

ಪಾಲಿಸೊ ಪಾರ್ವತಿ ರಮಣ | ಪ್ರಸನ್ನ ವೆಂಕಟ | Paliso Parvati Ramana | Sri Prasanna Venkata Dasaru

Image
ಸಾಹಿತ್ಯ : ಶ್ರೀ ಪ್ರಸನ್ನ ವೇಂಕಟ ದಾಸರು  Kruti: Sri Prasanna Venkata Dasaru ಪಾಲಿಸೊ ಪಾರ್ವತಿ ರಮಣ || ಪ || ಮಲ್ಲಿಕಾರ್ಜುನ ಶ್ರೀಶೈಲ ಸದನ ಪುಲ್ಲನಾಭ ಹರಿಕಥಾ ಬೋಧನ ||ಅಪ|| ಫಾಲ ನಯನ ಶುಂಡಾಲ ಚರ್ಮಧರ ಹಾಲಾಹಲವನು ಪಾನಗೈದ ಹರ ಮಾಲೋಲೆಯು ಕರ ಕಪಾಲ ತುಂಬಲು ವಾಲೋಗರದೋಳ್ ಭಜಕರ ಸಲಹಿದಿ || ೧ || ನಂದಿಗಮನ ಬಲು ಸುಂದರಿ ಸಂಗನ ವಂದಿತ ಮನಕಾನಂದದಾತ ಘನ ಬಂದೆ ನಂಬಿ ಗುರುವೆನ್ನುತ ನಿನ್ನ ಇಂದೆನಗೆ ದಯ ಮಾಡೋ ಮುನಿ ಮನಾ || ೨ || ಕರ್ಪೂರ ಗೌರವದಂಗ ಚಂದ್ರ ಶಿರ ಸರ್ಪಭೂಷಣ ಶಿವ ಅಂಗಜ ಮರ್ದನ ಅರ್ಪಿಸಿಕೊಂಬ ಭಕುತರಿಗೊಲಿವ ಸರ್ಪಶಯನ ಪ್ರಸನ್ವೇಂಕಟ ಪ್ರೀಯ || ೩ || paaliso paarvati ramaNa || pa || mallikaarjuna shrIshaila sadana pullanaabha harikathaa bOdhana ||apa|| Paala nayana shuMDaala carmadhara haalaahalavanu paanagaida hara maalOleyu kara kapaala tuMbalu vaalOgaradOL bhajakara salahidi || 1 || naMdigamana balu suMdari saMgana vaMdita manakaanaMdadaata ghana baMde naMbi guruvennuta ninna iMdenage daya maaDO muni manaa || 2 || karpUra gouravadaMga chaMdra shira sarpabhUShaNa shiva aMgaja mardana arpisikoMba bhakutarigoliva sarpashayana prasanvEMkaTa prIya || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru