ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ತಂದು ತೊರೆ ಶ್ರೀ ಮುಕುಂದನ | ಹಯವದನ | Tandu Tore Sri Mukundana | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ತಂದು ತೊರೆ ಶ್ರೀ ಮುಕುಂದನ ಗೋವಿಂದನ
ಎಂದೆಂದುಡುಪಿಲಿ ನಿಂದನ ಗೋವಿಂದನ ||ಪ||

ದಂಡ ಪಾಶಧರನು ಭೂಮಂಡಲದಿ ಮುನಿಗಳ ಹೆಂಡಿರಿತ್ತ ಭಿಕ್ಷೆಯುಂಡನ ಚೆಲ್ವ
ಕುಂಡಲ ಮಂಡಿತ ಗಂಡನ ಉದ್ದಂಡ ಕಠೋರ ಪ್ರಚಂಡನ ಗೋವಿಂದನ ||೧||

ಹಾರ ಪದಕ ಕಂಕಣ ಕಿರುಗೆಜ್ಜೆ ಉಡುದಾರ ವೀರ ಪೆಂಡ್ಯಗಳಿಟ್ಟನ ತನ್ನ
ಸೇರ್ದರಿಗಿಷ್ಟವ ಕೊಟ್ಟನ ನೀರಸ ಜನರ ಬಿಟ್ಟನ ಗೋವಿಂದನ ||೨||

ಮಂದಹಾಸವೆಂಬ ನವಚಂದ್ರಿಕೆಯಿಂದೆಸೆವ ಮುಖ ಇಂದುವಿನ ನೀರಜಾಕ್ಷನ ನವ
ಚಂದನಕರ್ಚಿತ ವಕ್ಷನ ಎಂದೆಂದು ಭಕ್ತರ ಪಕ್ಷನ ಗೋವಿಂದನ ||೩||

ಮಂದಜಾಂಡಾದಿಂದ್ರಮುಖ್ಯ ವೃಂದಾರಕರೊಡೆಯನ ಇಂದಿರೆಯಪ್ಪುವ ತೋಳ್ಗಳ ಶುಭ
ಕುಂದ ಕುಟ್ಮಲ ಪಲ್ಗಳ ಅಂದುಗೆ ಒಪ್ಪುವ ಕಾಲ್ಗಳ ಗೋವಿಂದನ ||೪||

ಇಂದು ಹಯವದನನ್ನ ಸಂದೇಹವ ಕಳೆಯುತ್ತ ಆನಂದದಿಲ್ಲಿಗೆ ಬಂದನ
ಚಂದದಿ ವೇದವ ತಂದನ ಆನಂದನ ರಾಣಿಯ ಕಂದನ ಗೋವಿಂದನ ||೫||


thamdu thore shri mukumdana govimdana 
eamdemduDupili nimdana govimdana ||p|| 

damDa paashadharanu bhumamDaladi munigaLa hemDiriththa bhikshheyumDana chelva 
kumDala mamDitha gamDana uddamDa kaThora prachamDana govimdana ||೧||

haara padaka kamkaNa kirugejje uDudaara vira pemDyagaLiTTana thanna 
serdarigishhTava koTTana nirasa janara biTTana govimdana ||೨|| 

mamdahaasavemba navachamdrikeyimdeseva mukha iamduvina nirajaakshhana nava 
chamdanakarchitha vakshhana eamdemdu bhakthara pakshhana govimdana ||೩|| 

mamdajaamDaadimdramukhya vrrimdaarakaroDeyana iamdireyappuva thoLgaLa shubha 
kumda kuTmala palgaLa aamduge oppuva kaalgaLa govimdana ||೪|| 

iamdu hayavadananna samdehava kaLeyuththa aanamdadillige bamdana 
chamdadi vedava thamdana aanamdana raaNiya kamdana govimdana ||೫||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru