ಜೋ ಜೋ ಕಂದರ್ಪಕೋಟಿ ಲಾವಣ್ಯ ಜೋ ಜೋ ವೃಂದಾರಕ ಶಿರೋರನ್ನ ||ಪ||
ಜೋ ಜೋ ನಂದನ ಸುಕೃತದ ಫಲವೆ ಜೋ ಜೋ ಮುನಿಮನಮಧುಪ ಕಮಲವೆ ||ಅ. ಪ||
ಪೊನ್ನತೊಟ್ಟಿಲ ಮೇಲೆ ಮಣಿಮಯವಾದ ವಿತಾನ್ನವ ಕಟ್ಟಿ ಪಟ್ಟೆಯ ಮೇಲ್ವಾಸಿನಲಿ |
ಚಿನ್ನ ಶ್ರೀ ಕೃಷ್ಣನ ಮಲಗಿಸಿ ಗೋಕುಲದ ಕನ್ನೆಯರೆಲ್ಲ ತೂಗುತ ಪಾಡಿದರೆ ||೧||
ಶಶಿಯ ಚೆಲುವ ಪೋಲ್ವ ಮೊಗದ ಚೆನ್ನಿಗನೆ ಎಸೆವ ಕಿರುಡೊಳ್ಳಿನ ಸೊಬಗ ಬಾಲಕನೆ |
ಪೊಸಕೆಂದಾವರೆಯಂದದಿ ಮೃದುಪದನೇ ಬಿಸರುಹನಯನ ಬಿಡದಿರೆಮ್ಮ ಕಂದ ||೨||
ಪೂತನಿ ಅಸುವನೀಂಟಿದ ಪೋತ ಶಿಶುವೆ ವಾತದೈತ್ಯನ ಗೆಲಿದದುಭುತ ಬಾಲ |
ಭೂತಗಳನಂಜಿಸುವರ್ಭಕನೆ ಓತೆಮ್ಮ ಶಿಶುಗಳ ಸಲಹೋ ಶ್ರೀ ಹರಿಯೆ ||೩||
ಅಮೃತವನೂಡಿ ಸುರರ ಬೆಳೆಸಿದನೆ ಭ್ರಮಿತನಾದ ಕರಿವರನ ಕಾಯ್ದವನೆ |
ಸುಮುಖತನದಿ ಪರೀಕ್ಷಿತನ ಪೊರೆದನೆ ಮಮತೆಯಿಂದೆಮ್ಮ ಶಿಶುಗಳ ನೀ ಸಲಹೋ ||೪||
ಪೊಳೆವ ಮೂಲರೂಪದಿ ತೋರಿದೆ ನೀ-ನುಳಿದ ಶಿಶುಗಳಂತೆ ಶಿಶುವೆನ್ನಬಹುದೆ |
ಲಲನೆ ಬೇಡಿಕೊಳ್ಳೆ ತನ್ನ ತಾನೆ ಶಿಶು - ಗಳ ಭಾವವಿಡಿದೆಯೆಂದೆಂಬರು ನಿನ್ನ ||೫||
ಈ ಮಹಿಯೊಳು ಹರಿ ಶಿಶುವಾಗೆ ತನ್ನ ಮ - ಹಿಮೆಯ ತುತಿಸುವ ಶ್ರುತಿವನಿತೆಯರು |
ವ್ಯಾಮೋಹದಿ ಬಂದು ಲಲನೆಯರಾದರು ಆ ಮುಗ್ಧೆಯರು ಪಾಡುತ ತೂಗಿದರೆ ||೬||
ನೀ ಶಿಶುವಾದರೆ ನಿನ್ನುದರೊದಳಿರ್ದ ಶ್ರುತಿಮುಕ್ತರು ಶಿಶುಗಳೆಂತಾಹರೋ |
ವೇಷಧರನಾಗಿ ಶಿಶುಗಳ ವಾಸಿನೊಲಿದೆ ವಾಸುದೇವ ನಮ್ಮ ಬಿಡದಿರು ಶ್ರೀಕೃಷ್ಣ ||೭||
ಆವಳಿಸಲು ನಿನ್ನ ಗರ್ಭದೊಳಗೆ ಭುವ - ನಾವಳಿ ಗೋಪಗೋಪಿಯರನ್ನು ತೋರಿದೆ |
ಶ್ರೀವರ ನೀನೆಲ್ಲರ ತಂದೆಯಲ್ಲದೆ ಭಾವಜ್ಞರ ಮತದಿ ಶಿಶುವೆಂತಪ್ಪೆ ||೮||
ಹಯವದನನಾಗಿ ವೇದವ ತಂದು ಪ್ರಿಯಸುತ ಚತುರಮುಖಗೆ ಪೇಳಿದಖಿಳ ವಿ - |
ದ್ಯೆಯ ಖನಿ ನೀನೀಗಲೇನೆಂದು ನುಡಿಯಲ-ರಿಯದ ಬಾಲಕನಾದ ಬಗೆ ಪೊಸತಯ್ಯ ||೯||
jo jo kamdarpakoTi laavaNya jo jo vrrimdaaraka shiroranna ||p||
jo jo namdana sukrrithada phalave jo jo munimanamadhupa kamalave ||a. p||
ponnathoTTila mele maNimayavaada vithaannava kaTTi paTTeya melvaasinali |
chinna shri krrishhNana malagisi gokulada kanneyarella thugutha paaDidare ||೧||
shashiya cheluva polva mogada chennigane eseva kiruDoLLina sobaga baalakane |
posakemdaavareyamdadi mrridupadane bisaruhanayana biDadiremma kamda ||೨||
puthani asuvanimTida potha shishuve vaathadaithyana gelidadubhutha baala |
bhuthagaLanamjisuvarbhakane othemma shishugaLa salaho shri hariye ||೩||
amrrithavanuDi surara beLesidane bhramithanaada karivarana kaaydavane |
sumukhathanadi parikshhithana poredane mamatheyimdemma shishugaLa ni salaho ||೪||
poLeva mularupadi thoride ni-nuLida shishugaLamthe shishuvennabahude |
lalane beDikoLLe thanna thaane shishu -gaLa bhaavaviDideyemdembaru ninna ||೫||
ia mahiyoLu hari shishuvaage thanna ma -himeya thuthisuva shruthivanitheyaru |
vyaamohadi bamdu lalaneyaraadaru aaa mugdheyaru paaDutha thugidare ||೬||
ni shishuvaadare ninnudarodaLirda shruthimuktharu shishugaLemthaaharo |
veshhadharanaagi shishugaLa vaasinolide vaasudeva namma biDadiru shrikrrishhNa ||೭||
aavaLisalu ninna garbhadoLage bhuva -naavaLi gopagopiyarannu thoride |
shrivara ninellara thamdeyallade bhaavajnjara mathadi shishuvemthappe ||೮||
hayavadananaagi vedava thamdu priyasutha chathuramukhage peLidakhiLa vi - |
dyeya khani ninigalenemdu nuDiyal-riyada baalakanaada bage posathayya ||೯||