ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಈರೇಳು ಲೋಕದೊಳಗೆ ಇವಗೆಣೆಗಾಣೆ | ಹಯವದನ | Irelu Lokadolage Ivagenegane | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಈರೇಳು ಲೋಕದೊಳಗೆ ಇವಗೆಣೆಗಾಣೆ ಗೋವಿಂದರಾಯನಿಗೆ
ಮಾರನ್ನ ಪೆತ್ತ ಮನೋಹರ ಮೂರುತಿ  ಗೋವಿಂದರಾಯನಿಗೆ ||ಪ||

ನೀಲನೀರದನಿಭ ನಿರ್ಮಲಕಾಯ ಗೋವಿಂದರಾಯನಿಗೆ
ಪಾಲಸಾಗರದಲ್ಲಿ ಪವಡಿಸಿ ಪಾಲಿಪ ಗೋವಿಂದರಾಯನಿಗೆ ||೧||

ಮತ್ಸ್ಯ ಕೂರ್ಮ ವರಾಹ ನಾರಸಿಂಹ ವಾಮನ ಗೋವಿಂದರಾಯನಿಗೆ
ಕುತ್ಸಿತರಾಯರ ಕೊಂದ ಕೊಡಲಿಯ ಗೋವಿಂದರಾಯನಿಗೆ ||೨||

ರಘುಕುಲ ಯದುಕುಲ ಬುದ್ಧ ಕಲ್ಕಿಯಾದ ಗೋವಿಂದರಾಯನಿಗೆ
ಸೊಗಸು ನುಡಿಗೆ ಮೆಚ್ಚಿ ಶೋಕವ ಕಳೆವ ಗೋವಿಂದರಾಯನಿಗೆ ||೩||

ಕಡೆಗೋಲ ಪಿಡಿದು ನಮ್ಮುಡುಪಿಲಿ ನೆಲೆಸಿದ ಗೋವಿಂದರಾಯನಿಗೆ
ಬಡನಡುವಿನ ಭಾವಕಿಯರೊಡನಾಡುವ ಗೋವಿಂದರಾಯನಿಗೆ ||೪||

ವರ್ಣಿಸಿ ಪೊಗಳುವ ವಾದಿರಾಜಗೊಲಿದ ಗೋವಿಂದರಾಯನಿಗೆ
ಚೆನ್ನದ ಚೆಲುವನೆ ಜಯ ಹಯವದನ ಶ್ರೀಗೋವಿಂದರಾಯನಿಗೆ ||೫||

ireLu lokadoLage ivageNegaaNe govimdaraayanige 
maaranna peththa manohara muruthi govimdaraayanige ||p|| 

nilaniradanibha nirmalakaaya govimdaraayanige 
paalasaagaradalli pavaDisi paalipa govimdaraayanige ||೧|| 

mathsya kurma varaaha naarasimha vaamana govimdaraayanige 
kuthsitharaayara komda koDaliya govimdaraayanige ||೨|| 

raghukula yadukula buddha kalkiyaada govimdaraayanige 
sogasu nuDige mechchi shokava kaLeva govimdaraayanige ||೩|| 

kaDegola piDidu nammuDupili nelesida govimdaraayanige 
baDanaDuvina bhaavakiyaroDanaaDuva govimdaraayanige ||೪|| 

varNisi pogaLuva vaadiraajagolida govimdaraayanige 
chennada cheluvane jaya hayavadana shrigovimdaraayanige ||೫||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru