ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಆನಂದ ತೀರ್ಥರೆಂಬೊ | ಗುರು ಪ್ರಾಣೇಶ ವಿಠಲ | Ananda Teertharembo | Guru Pranesha Vithala


ಸಾಹಿತ್ಯ : ಶ್ರೀ ಗುರು ಪ್ರಾಣೇಶ ವಿಠಲ ದಾಸರು 
Kruti:Sri Guru Pranesha Vithala Dasaru 


ಆನಂದ ತೀರ್ಥರೆಂಬೊ ಅರ್ಥಿಯ ಪೆಸರುಳ್ಳ ಗುರು ಮಧ್ವ ಮುನಿರಾಯ ||ಪ||
ಏನೆಂಬೆ ನಾ ನಿನ್ನ ಕರುಣಕ್ಕೆ ಎಣೆಗಾಣೆ ಗುರು ಮಧ್ವ ಮುನಿರಾಯ ||ಅ. ಪ ||

ಬೇಸರದೆ ಸರ್ವರೊಳು ಶ್ವಾಸ ಜಪಗಳ ಮಾಡಿ  ಗುರು ಮಧ್ವ ಮುನಿರಾಯ ||
ಶ್ರೀಶಗರ್ಪಿಸುತ್ತ ನಿನ್ನ ದಾಸರನು ಸಲಹಿದೆ ಗುರು ಮಧ್ವ ಮುನಿರಾಯ ||೧||

ಅಂದು ಹನುಮಂತನಾಗಿ ಬಂದು ಸುಗ್ರೀವಗೆ ಗುರು ಮಧ್ವ ಮುನಿರಾಯ ||
ಅಂದವಾದ ಪದವಿತ್ತಾನಂದದಿಂದ ಸಲಹಿದೆ ಗುರು ಮಧ್ವ ಮುನಿರಾಯ ||೨ ||

ಕುಂತಿಯ ಕುಮಾರನಾಗಿ ಹಂತ ಕೌರವರ ಕೊಂದೆ ಗುರು ಮಧ್ವ ಮುನಿರಾಯ ||
ಅನಂತ ಪುಣ್ಯವ ಗಳಿಸಿ ಶ್ರೀಕಾಂತನಿಗರ್ಪಿಸಿದೆ ಗುರು ಮಧ್ವ ಮುನಿರಾಯ ||೩||

ದೈತ್ಯರನು ಕಾದಿ ಗೆದ್ದು ನಿನ್ನ ಭಕ್ತರಿಗೆ ಗುರು ಮಧ್ವ ಮುನಿರಾಯ ||
ಶುದ್ಧ ತಾತ್ಪರ್ಯ ವಾಕ್ಯ ಪದ್ದತಿಯ ತೋರಿಸಿದೆ ಗುರು ಮಧ್ವ ಮುನಿರಾಯ ||೪||

ಗುರು ಪ್ರಾಣೇಶ ವಿಠಲ ಪರನೆಂದು ಡಂಗುರವ ಗುರು ಮಧ್ವ ಮುನಿರಾಯ ||
ಸಾರಿ ಸಜ್ಜನರಿಗೆ ಹರಿಯ ಲೋಕ ತೋರಿಸಿದೆ ಗುರು ಮಧ್ವ ಮುನಿರಾಯ ||೫||

aanamda thirthharembo arthhiya pesaruLLa guru madhva muniraaya ||p|| 
enembe naa ninna karuNakke eNegaaNe guru madhva muniraaya ||a. pa || 

besarade sarvaroLu shvaasa japagaLa maaDi guru madhva muniraaya || 
shrishagarpisuththa ninna daasaranu salahide guru madhva muniraaya ||೧|| 

aamdu hanumamthanaagi bamdu sugrivage guru madhva muniraaya || 
aamdavaada padaviththaanamdadimda salahide guru madhva muniraaya ||೨ || 

kumthiya kumaaranaagi hamtha kauravara komde guru madhva muniraaya || 
anamtha puNyava gaLisi shrikaamthanigarpiside guru madhva muniraaya ||೩|| 

daithyaranu kaadi geddu ninna bhaktharige guru madhva muniraaya || 
shuddha thaathparya vaakya paddathiya thoriside guru madhva muniraaya ||೪|| 

guru praaNesha viThala paranemdu Damgurava guru madhva muniraaya || 
saari sajjanarige hariya loka thoriside guru madhva muniraaya ||೫||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru