ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಆನಂದ ತೀರ್ಥರೆಂಬೊ - ಗುರುಮಧ್ವ ಮುನಿರಾಯ | ಹಯವದನ |Ananda Theertharembo | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಆನಂದ ತೀರ್ಥರೆಂಬೊ ಅರ್ಥಿಯ ಪೆಸರುಳ್ಳ ಗುರು ಮಧ್ವ ಮುನಿರಾಯ ||ಪ||
ಏನೆಂಬೆ ನಾ ನಿನ್ನ ಗುಣ ಮಹಾತ್ಮೆಗೆ ಗುರು ಮಧ್ವ ಮುನಿರಾಯ ||ಅ. ಪ ||

ಮುಖ್ಯಪ್ರಾಣ ರೂಪನಾಗಿ ಮುನಿಯ ಚಾರಿತ್ರ್ಯ ತಾಳಿದಿ ಗುರು ಮಧ್ವ ಮುನಿರಾಯ ||
ಸೊಕ್ಕಿದ ದೈತ್ಯರ ಸೊಕ್ಕು ಮುರಿದು ಶೋಭಿಸಿದಿ  ಗುರು ಮಧ್ವ ಮುನಿರಾಯ ||೧||

ವಾನರೇಂದ್ರ ರೂಪನಾಗಿ ವಾರಿಧಿಯ ದಾಟಿದೆಯೋ  ಗುರು ಮಧ್ವ ಮುನಿರಾಯ ||
ಜಾನಕಿಗುಂಗುರ ಕೊಟ್ಟು ಜಗಜ್ಜಟ್ಟಿಗಳ ಕುಟ್ಟಿದಿ ಗುರು ಮಧ್ವ ಮುನಿರಾಯ ||೨ ||

ಕ್ಷಿತಿಯೊಳು ಕುಂತಿಸುತ ಭೀಮನೆಂದೆನಿಸಿದಿ ಗುರು ಮಧ್ವ ಮುನಿರಾಯ ||
ಅಹಿತದಿಂದ ಯದುಪತಿಯ ಭಜಿಸಿದಿ ಗುರು ಮಧ್ವ ಮುನಿರಾಯ ||೩||

ಚಿಕ್ಕತನದಲ್ಲಿ ಶ್ರೀ ಕೃಷ್ಣನ ಪೂಜಿಸಿದಿ ಗುರು ಮಧ್ವ ಮುನಿರಾಯ ||
ಏಕವಿಂಶತಿ ಕುಭಾಷ್ಯವ ಜರಿದೆಯೋ ಗುರು ಮಧ್ವ ಮುನಿರಾಯ ||೪||

ಅತಿಬಲವಂತ ಶ್ರೀ ಹಯವದನನ್ನ ಭಜಿಸಿದ್ಯೋ ಗುರು ಮಧ್ವ ಮುನಿರಾಯ ||
ಸತತ ಭಕ್ತರಿಗೆ ಕರುಣಾಮೃತವ ಕರೆದೆ ಗುರು ಮಧ್ವ ಮುನಿರಾಯ ||೫||

aanamda thirthharembo arthhiya pesaruLLa guru madhva muniraaya ||p|| 
enembe naa ninna guNa mahaathmege guru madhva muniraaya ||a. pa || 

mukhyapraaNa rupanaagi muniya chaarithrya thaaLidi guru madhva muniraaya || 
sokkida daithyara sokku muridu shobhisidi guru madhva muniraaya ||೧|| 

vaanaremdra rupanaagi vaaridhiya daaTideyo guru madhva muniraaya || 
jaanakigumgura koTTu jagajjaTTigaLa kuTTidi guru madhva muniraaya ||೨ || 

kshhithiyoLu kumthisutha bhimanemdenisidi guru madhva muniraaya || 
ahithadimda yadupathiya bhajisidi guru madhva muniraaya ||೩|| 

chikkathanadalli shri krrishhNana pujisidi guru madhva muniraaya || 
ekavimshathi kubhaashhyava jarideyo guru madhva muniraaya ||೪|| 

athibalavamtha shri hayavadananna bhajisidyo guru madhva muniraaya || 
sathatha bhaktharige karuNaamrrithava karede guru madhva muniraaya ||೫||
 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru