ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಜಯಪ್ರದನು ಜಗಕೆ ಶ್ರೀ ಹಯವದನ | ಹಯವದನ | Jayapradanu Jagake Sri Hayavadana | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಜಯಪ್ರದನು ಜಗಕೆ ಶ್ರೀ ಹಯವದನ  ಮೂರ್ತಿಯಿರೆ ಭಯವ್ಯಾಕೆ ಭಕ್ತಜನಕೆ ||ಪ||
ನಯದಿಂದ ಗೆಲಿಸುವನು ನಾಲ್ದಿಕ್ಕಿನೊಳಗಿದ್ದ ಮಾಯವಾದಿಗಳನ್ನು ||ಅ . ಪ||

ಆದಿಯಲಿ ಬ್ರಹ್ಮನಿಗೆ ಭೀತಿಯನು ಬಿಡಿಸಿದ ನಾದಮಯನಾದ ದೇವ ಭೇದವಿಲ್ಲದೆ ಎಲ್ಲಾ
ಭೇದವೆಂಬುವರನ್ನು ಕಾದ ಬಾಣಲೆಗೆ ತಟ್ಟಿ ಮೋದಿಸಿ ಕೊಲುವ ||೧||

ಉದಯದಲ್ಲಿ ಎದ್ದು ನರ ಸದಮಲಾತ್ಮಕನಾಗಿ ಹೃದಯದೊಳಗೆ ಹರಿಯ ತಂದು ಮುಂದು
ಸದಯನು ನೀನೆನುತ ಸದ್ವೃತ್ತಿಉದಯನು ನೀನೆನುತ ದಧಿಚೋರ ಕೃಷ್ಣನ್ನ ಮುದದಿ ಭಜಿಪರಿಗೆ ||೨||

ದುಷ್ಟಮಲ್ಲರ ಎದೆ ಮೆಟ್ಟಿ ಮೆರೆವ ಜಗಜಟ್ಟಿ ಮಧ್ವರಾಯರ ಮುಟ್ಟಿ ಭಜಿಸುತ ನಿತ್ಯ
ಇಷ್ಟವನು ಬೇಡಿದರೆ ಕಷ್ಟಗಳನು ಕಳೆವ ಉತ್ಕೃಷ್ಟ ಹಯವದನ ದೊರೆ ||೩||

jayapradanu jagake shri hayavadana murthiyire 
bhayavyaake bhakthajanake ||p|| 
nayadimda gelisuvanu naaldikkinoLagidda 
maayavaadigaLannu ||aa .p|| 

aadiyali brahmanige bhithiyanu biDisida 
naadamayanaada deva bhedavillade ellaa 
bhedavembuvarannu kaada baaNalege 
thaTTi modisi koluva ||೧|| 

udayadalli eddu nara sadamalaathmakanaagi 
hrridayadoLage hariya thamdu mumdu 
sadayanu ninenutha sadvrriththiudayanu ninenutha 
dadhichora krrishhNanna mudadi bhajiparige ||೨|| 

dushhTamallara ede meTTi mereva jagajaTTi 
madhvaraayara muTTi bhajisutha nithya 
ishhTavanu beDidare kashhTagaLanu kaLeva 
uthkrrishhTa hayavadana dore ||೩||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru