ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಆಂಜನೇಯನೆ ಅಮರವಂದಿತ | ಹಯವದನ | Anjaneyane Amara vandita | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಆಂಜನೇಯನೆ  ಅಮರ ವಂದಿತ ಕಂಜನಾಭನ ದೂತನೆ ||ಪ ||
ಮಂಜಿನೋಲಗದಂತೆ  ಶರಾಧಿಯ ದಾಟಿದ ಮಹಾ ಧೀರನೆ ||ಅ. ಪ||

ಆಂಜನೇಯನೆ ನಿನ್ನ ಗುಣಗಳ ಪೊಗಳಲಳವೆ ಪ್ರಖ್ಯಾತನೇ ||
ಸಂಜೀವನವ ತಂದು ಕಪಿಗಳ ನಂಜು ಕಳೆದ ಪ್ರಖ್ಯಾತನೇ || ೧ ||

ಕಾಮನಿಗ್ರಹನೆನಿಸಿ ಸುರರಭಿಮಾನಿ ದೇವತೆ ಎನಿಸಿದೆ || 
ರಾಮಪಾದಕ್ಕೆರಗಿ ನಡೆದು ನಿಸ್ಸೀಮ ನೀನೆoದೆನಿಸಿದೆ ||೨||

ಸಿಂಧು ಹಾರಿದೆ ಶೀಘ್ರದಿಂದಲಿ ಬಂದು ಸೀತೆಗೆ ನಮಿಸಿದೆ ||
ತಂದು ಮುದ್ರೆಯನಿತ್ತು ಮಾತೆಯ ಮನವ ಸಂತೋಷಪಡಿಸಿದೆ ||೩||

ಜನಕ ತನುಜೆಯ ಮನವ ಹರ್ಷಿಸಿ ವನವ ಕಿತ್ತೀಡಾಡಿದೆ || 
ಧನುಜರನ್ನು ಸದೆದು ಲಂಕೆಯ ಅನಲಗಾಹುತಿ ಮಾಡಿದೆ ||೪||

ರಾಮಕಾರ್ಯವ ವಹಿಸಿ ಅಕ್ಷಕುಮಾರನನು ಸಂಹರಿಸಿದೆ ||
ಘೋರ ರಕ್ಕಸರೆಂಬುವರನು ಮಾರಿ ವಶವನುಗೈಸಿದೆ ||೫||

ಭರದಿ ಬಂದು ರಾಮಪಾದಕ್ಕೆರಗಿ ಬಿನ್ನಹ ಮಾಡಿದೆ ||
ಉರಗ ಗಿರಿ ಹಾಯವದನನ ಪರಮ ಭಕ್ತನೆಂದೆನಿಸಿದೆ ||೬||

aaamjaneyane amara vamditha kamjanaabhana duthane ||pa || 
mamjinolagadamthe sharaadhiya daaTida mahaa dhirane ||a. p|| 

aaamjaneyane ninna guNagaLa pogaLalaLave prakhyaathane || 
samjivanava thamdu kapigaLa namju kaLeda prakhyaathane ||1|| 

kaamanigrahanenisi surarabhimaani devathe eniside || 
raamapaadakkeragi naDedu nissima nineoadeniside ||2|| 

simdhu haaride shighradimdali bamdu sithege namiside || 
thamdu mudreyaniththu maatheya manava samthoshhapaDiside ||3|| 

janaka thanujeya manava harshhisi vanava kiththiDaaDide || 
dhanujarannu sadedu lamkeya analagaahuthi maaDide ||4|| 

raamakaaryava vahisi akshhakumaarananu samhariside || 
ghora rakkasarembuvaranu maari vashavanugaiside ||5|| 

bharadi bamdu raamapaadakkeragi binnaha maaDide || 
uraga giri haayavadanana parama iibhakthanemdeniside ||6||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru