Posts

Showing posts from June, 2020

ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಆನಂದ ತೀರ್ಥರೆಂಬೊ | ಗುರು ಪ್ರಾಣೇಶ ವಿಠಲ | Ananda Teertharembo | Guru Pranesha Vithala

Image
ಸಾಹಿತ್ಯ : ಶ್ರೀ ಗುರು ಪ್ರಾಣೇಶ ವಿಠಲ ದಾಸರು  Kruti:Sri Guru Pranesha Vithala Dasaru  ಆನಂದ ತೀರ್ಥರೆಂಬೊ ಅರ್ಥಿಯ ಪೆಸರುಳ್ಳ ಗುರು ಮಧ್ವ ಮುನಿರಾಯ ||ಪ|| ಏನೆಂಬೆ ನಾ ನಿನ್ನ ಕರುಣಕ್ಕೆ ಎಣೆಗಾಣೆ ಗುರು ಮಧ್ವ ಮುನಿರಾಯ ||ಅ. ಪ || ಬೇಸರದೆ ಸರ್ವರೊಳು ಶ್ವಾಸ ಜಪಗಳ ಮಾಡಿ  ಗುರು ಮಧ್ವ ಮುನಿರಾಯ || ಶ್ರೀಶಗರ್ಪಿಸುತ್ತ ನಿನ್ನ ದಾಸರನು ಸಲಹಿದೆ ಗುರು ಮಧ್ವ ಮುನಿರಾಯ ||೧|| ಅಂದು ಹನುಮಂತನಾಗಿ ಬಂದು ಸುಗ್ರೀವಗೆ ಗುರು ಮಧ್ವ ಮುನಿರಾಯ || ಅಂದವಾದ ಪದವಿತ್ತಾನಂದದಿಂದ ಸಲಹಿದೆ ಗುರು ಮಧ್ವ ಮುನಿರಾಯ ||೨ || ಕುಂತಿಯ ಕುಮಾರನಾಗಿ ಹಂತ ಕೌರವರ ಕೊಂದೆ ಗುರು ಮಧ್ವ ಮುನಿರಾಯ || ಅನಂತ ಪುಣ್ಯವ ಗಳಿಸಿ ಶ್ರೀಕಾಂತನಿಗರ್ಪಿಸಿದೆ ಗುರು ಮಧ್ವ ಮುನಿರಾಯ ||೩|| ದೈತ್ಯರನು ಕಾದಿ ಗೆದ್ದು ನಿನ್ನ ಭಕ್ತರಿಗೆ ಗುರು ಮಧ್ವ ಮುನಿರಾಯ || ಶುದ್ಧ ತಾತ್ಪರ್ಯ ವಾಕ್ಯ ಪದ್ದತಿಯ ತೋರಿಸಿದೆ ಗುರು ಮಧ್ವ ಮುನಿರಾಯ ||೪|| ಗುರು ಪ್ರಾಣೇಶ ವಿಠಲ ಪರನೆಂದು ಡಂಗುರವ ಗುರು ಮಧ್ವ ಮುನಿರಾಯ || ಸಾರಿ ಸಜ್ಜನರಿಗೆ ಹರಿಯ ಲೋಕ ತೋರಿಸಿದೆ ಗುರು ಮಧ್ವ ಮುನಿರಾಯ ||೫|| aanamda thirthharembo arthhiya pesaruLLa guru madhva muniraaya ||p||  enembe naa ninna karuNakke eNegaaNe guru madhva muniraaya ||a. pa ||  besarade sarvaroLu shvaasa japagaLa maaDi guru madhva muniraaya || ...

ತಂದು ತೊರೆ ಶ್ರೀ ಮುಕುಂದನ | ಹಯವದನ | Tandu Tore Sri Mukundana | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ತಂದು ತೊರೆ ಶ್ರೀ ಮುಕುಂದನ ಗೋವಿಂದನ ಎಂದೆಂದುಡುಪಿಲಿ ನಿಂದನ ಗೋವಿಂದನ ||ಪ|| ದಂಡ ಪಾಶಧರನು ಭೂಮಂಡಲದಿ ಮುನಿಗಳ ಹೆಂಡಿರಿತ್ತ ಭಿಕ್ಷೆಯುಂಡನ ಚೆಲ್ವ ಕುಂಡಲ ಮಂಡಿತ ಗಂಡನ ಉದ್ದಂಡ ಕಠೋರ ಪ್ರಚಂಡನ ಗೋವಿಂದನ ||೧|| ಹಾರ ಪದಕ ಕಂಕಣ ಕಿರುಗೆಜ್ಜೆ ಉಡುದಾರ ವೀರ ಪೆಂಡ್ಯಗಳಿಟ್ಟನ ತನ್ನ ಸೇರ್ದರಿಗಿಷ್ಟವ ಕೊಟ್ಟನ ನೀರಸ ಜನರ ಬಿಟ್ಟನ ಗೋವಿಂದನ ||೨|| ಮಂದಹಾಸವೆಂಬ ನವಚಂದ್ರಿಕೆಯಿಂದೆಸೆವ ಮುಖ ಇಂದುವಿನ ನೀರಜಾಕ್ಷನ ನವ ಚಂದನಕರ್ಚಿತ ವಕ್ಷನ ಎಂದೆಂದು ಭಕ್ತರ ಪಕ್ಷನ ಗೋವಿಂದನ ||೩|| ಮಂದಜಾಂಡಾದಿಂದ್ರಮುಖ್ಯ ವೃಂದಾರಕರೊಡೆಯನ ಇಂದಿರೆಯಪ್ಪುವ ತೋಳ್ಗಳ ಶುಭ ಕುಂದ ಕುಟ್ಮಲ ಪಲ್ಗಳ ಅಂದುಗೆ ಒಪ್ಪುವ ಕಾಲ್ಗಳ ಗೋವಿಂದನ ||೪|| ಇಂದು ಹಯವದನನ್ನ ಸಂದೇಹವ ಕಳೆಯುತ್ತ ಆನಂದದಿಲ್ಲಿಗೆ ಬಂದನ ಚಂದದಿ ವೇದವ ತಂದನ ಆನಂದನ ರಾಣಿಯ ಕಂದನ ಗೋವಿಂದನ ||೫|| thamdu thore shri mukumdana govimdana  eamdemduDupili nimdana govimdana ||p||  damDa paashadharanu bhumamDaladi munigaLa hemDiriththa bhikshheyumDana chelva  kumDala mamDitha gamDana uddamDa kaThora prachamDana govimdana ||೧|| haara padaka kamkaNa kirugejje uDudaara vira pemDyagaLiTTana thanna  serdarigishhTava koTTana nir...

ಒಂದು ಮೂರುತಿಯಲ್ಲಿ ಹರಿಹರ | ಹಯವದನ | Ondu Murutiyalli Hari Hara | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಒಂದು ಮೂರುತಿಯಲ್ಲಿ ಹರಿಹರದೇವರಿಬ್ಬರು  ಬಂದು ನೆಲೆಗೊಂಡುದನ ಕಂಡೆನದ್ಭುತವ ||ಪ|| ಭಾವಜನ ಪಿತನೊಬ್ಬ ಅವನ ಕೊಂದವನೊಬ್ಬ ಹಾವ ತುಳಿದವನೊಬ್ಬ ಧರಿಸಿದವನೊಬ್ಬ ಗೋವಾ ಕಾಯಿದನೊಬ್ಬ ಅದನೇರಿದವನೊಬ್ಬ ಭಾವಿಸಲು ವಿಪರೀತಚರಿತರಂತಿರ್ದು ||೧|| ಬಾಣನ ಗೆಲಿದವನೊಬ್ಬ ಬಾಗಿಲ ಕಾಯಿದವನೊಬ್ಬ ದಾನವರ ರಿಪುವೊಬ್ಬ ವರವೀವನೊಬ್ಬ ಏನನೆಂಬೆನೊ ಜಗವ ಕಾವುತಿಹನೊಬ್ಬ ನಿ - ಧಾನಿಸಲು ಸಂಹರಿಸಿ ಕೊಲ್ಲುತಿಪ್ಪನೊಬ್ಬ ||೨|| ಯಾಗಪಾಲಕನೊಬ್ಬ ಯಾಗಭಂಜನನೊಬ್ಬ ನಾಗರಕ್ಷಕನೊಬ್ಬ ನಾಗಶಿಕ್ಷಕನು ಒಬ್ಬ ಈಗ ನಲ್ಲಳಿಗರ್ಧದೇಹವನಿತ್ತ ಶಿವನಂತೆ ಭೋಗದೊಳು ಹೊಂದಿಹ ಹಯವದನ ಬಲ್ಲ ||೩|| oamdu muruthiyalli hariharadevaribbaru  bamdu nelegomDudana kamDenadbhuthava ||p||  bhaavajana pithanobba avana komdavanobba  haava thuLidavanobba dharisidavanobba  govaa kaayidanobba adaneridavanobba  bhaavisalu viparithacharitharamthirdu ||೧||  baaNana gelidavanobba baagila kaayidavanobba  daanavara ripuvobba varavivanobba  enanembeno jagava kaavuthihanobba ni -  dhaanisalu samharisi kolluthippanobba ||೨||  yaagapaalakanobba yaag...

ಈರೇಳು ಲೋಕದೊಳಗೆ ಇವಗೆಣೆಗಾಣೆ | ಹಯವದನ | Irelu Lokadolage Ivagenegane | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಈರೇಳು ಲೋಕದೊಳಗೆ ಇವಗೆಣೆಗಾಣೆ ಗೋವಿಂದರಾಯನಿಗೆ ಮಾರನ್ನ ಪೆತ್ತ ಮನೋಹರ ಮೂರುತಿ  ಗೋವಿಂದರಾಯನಿಗೆ ||ಪ|| ನೀಲನೀರದನಿಭ ನಿರ್ಮಲಕಾಯ ಗೋವಿಂದರಾಯನಿಗೆ ಪಾಲಸಾಗರದಲ್ಲಿ ಪವಡಿಸಿ ಪಾಲಿಪ ಗೋವಿಂದರಾಯನಿಗೆ ||೧|| ಮತ್ಸ್ಯ ಕೂರ್ಮ ವರಾಹ ನಾರಸಿಂಹ ವಾಮನ ಗೋವಿಂದರಾಯನಿಗೆ ಕುತ್ಸಿತರಾಯರ ಕೊಂದ ಕೊಡಲಿಯ ಗೋವಿಂದರಾಯನಿಗೆ ||೨|| ರಘುಕುಲ ಯದುಕುಲ ಬುದ್ಧ ಕಲ್ಕಿಯಾದ ಗೋವಿಂದರಾಯನಿಗೆ ಸೊಗಸು ನುಡಿಗೆ ಮೆಚ್ಚಿ ಶೋಕವ ಕಳೆವ ಗೋವಿಂದರಾಯನಿಗೆ ||೩|| ಕಡೆಗೋಲ ಪಿಡಿದು ನಮ್ಮುಡುಪಿಲಿ ನೆಲೆಸಿದ ಗೋವಿಂದರಾಯನಿಗೆ ಬಡನಡುವಿನ ಭಾವಕಿಯರೊಡನಾಡುವ ಗೋವಿಂದರಾಯನಿಗೆ ||೪|| ವರ್ಣಿಸಿ ಪೊಗಳುವ ವಾದಿರಾಜಗೊಲಿದ ಗೋವಿಂದರಾಯನಿಗೆ ಚೆನ್ನದ ಚೆಲುವನೆ ಜಯ ಹಯವದನ ಶ್ರೀಗೋವಿಂದರಾಯನಿಗೆ ||೫|| ireLu lokadoLage ivageNegaaNe govimdaraayanige  maaranna peththa manohara muruthi govimdaraayanige ||p||  nilaniradanibha nirmalakaaya govimdaraayanige  paalasaagaradalli pavaDisi paalipa govimdaraayanige ||೧||  mathsya kurma varaaha naarasimha vaamana govimdaraayanige  kuthsitharaayara komda koDaliya govimdaraayanige ||೨||  raghukula yadukula buddha kalkiyaada gov...

ಬಾರೈಯ್ಯ ಕೃಷ್ಣ ಬಾರೈ | ಹಯವದನ | Baraiyya Krishna Barai | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಬಾರೈಯ್ಯ ಕೃಷ್ಣ ಬಾರೈ ಬಾಹದಿದ್ದಡೆ ಕಾರುಣ್ಯನಿಧಿಯೆಂಬ ಕಥೆಯ ಅ - ದಾರು ಬಣ್ಣಿಪರು ವೇದಾಂತದೇವಿಯರೆಮ್ಮದೂರುವರೀಗೆ ||ಪ|| ಕುಂಜರವರದ ನೀಲಾಂಜನವರ್ಣ ನೀ ಕಂಜನೇತ್ರನೆ ಕಾಮನಯ್ಯ  ಮಂಜುಳಮೂರ್ತಿ ಮನೋಹರಕೀರ್ತಿ ಪರಭಂಜನನೊಡೆಯ ಬಾರೊ ||೧|| ಮಂದರಗಂಧದ ಮಂದಮಾರುತ ಬಂದ ಚಂದಿರಮುಡಿದ ಚದುರ ಬಂದ ಕಂದರ್ಪನರವಿಂದನೆಂಬ ಕಣೆಯ ತೊಟ್ಟ ಮಂದರಧರನೆ ಬಾರೊ ||೨|| ನೋಡುವೆ ನುಡಿಸುವೆ ಪಾಡುವೆ ಬಯಕೆಯ ಬೇಡುವೆ ಹಯವದನನ ಮಾಡುವೆ ಪೂಜೆಯ ಕೂಡುವೆ ನಿನ್ನೊಡನಾಡುವೆನೊ ಬೇಗನೆ ಕಾಡದೆ ಬೇಗ ಬಾರೊ ||೩||  baaraiyya krrishhNa baarai baahadiddaDe  kaaruNyanidhiyemba kathheya aa -  daaru baNNiparu vedaamthadeviyaremmaduruvarige ||p||  kumjaravarada nilaamjanavarNa ni kamjanethrane kaamanayya  mamjuLamurthi manoharakirthi parabhamjananoDeya baaro ||1||  mamdaragamdhada mamdamaarutha bamda chamdiramuDida chadura bamda kamdarpanaravimdanemba kaNeya thoTTa mamdaradharane baaro ||2||  noDuve nuDisuve paaDuve bayakeya beDuve hayavadanana  maaDuve pujeya kuDuve ninnoDanaaDuveno begane kaaDade bega...

ವೇದವ ತಂದು ವಿಧಿಗೀವಂದೆ | ಹಯವದನ | Vedava Tandu Vidhigeevande | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ವೇದವ ತಂದು ವಿಧಿಗೀವಂದೆ ನೀ ಸಾಧುಜನರ ಸಲಹಲಿ ಬಂದೆ ||ಪ|| ಮೋದದಿಂದೆಮ್ಮ ಮನದಿ ನಿಂದೆ ನೀ ಬಾಧಿಪ ದುರಿತತತಿಯ ಕೊಂದೆ ||ಅ. ಪ|| ಸಕಲ ಸುರರಿಗೆ ಶಿರೋರನ್ನ ನೀ ಅಕಳಂಕಾಶ್ರಿತಜನಮಾನ್ಯ ನಿಖಿಲ ನಿಗಮನಿಕರದಿ ವರ್ಣ್ಯ ನೀ ಕರುಣಾಕಟಾಕ್ಷದಿ ನೋಡೆನ್ನ ||೧|| ಕೈವಲ್ಯಪದವಿಯ ಕೊಡಬಲ್ಲ ನಿನ್ನ ಸೇವಿಪ ಸುಜನರಿಗೆಣೆಯಿಲ್ಲ ಭಾವಜಕೋಟಿಯಿಂದತಿಚೆಲ್ವ ನೀ ಶ್ರೀವನಿತೆಗೆ ಸಿಲುಕುವನಲ್ಲ ||೨|| ಹಯವದನಹೃದಯಸದನ ಜಯ ಶಶಿವರ್ಣ ಜಗತಿಪೂರ್ಣ ಭಯಹರ ಭಾಸುರ ಸಿರಿಚರಣ ನಿನ್ನ ದಯಪಾತ್ರಾನುದ್ಧರಿಸೆನ್ನ ||೩|| vedava thamdu vidhigivamde ni saadhujanara salahali bamde ||p||  modadimdemma manadi nimde ni baadhipa durithathathiya komde ||a. p||  sakala surarige shiroranna ni akaLamkaashrithajanamaanya  nikhila nigamanikaradi varNya ni karuNaakaTaakshhadi noDenna ||೧||  kaivalyapadaviya koDaballa ninna sevipa sujanarigeNeyilla  bhaavajakoTiyimdathichelva ni shrivanithege silukuvanalla ||೨||  hayavadanahrridayasadana jaya shashivarNa jagathipurNa  bhayahara bhaasura siricharaNa ninna dayapaathraanuddharisenna ||೩|...

ಜಯಪ್ರದನು ಜಗಕೆ ಶ್ರೀ ಹಯವದನ | ಹಯವದನ | Jayapradanu Jagake Sri Hayavadana | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಜಯಪ್ರದನು ಜಗಕೆ ಶ್ರೀ ಹಯವದನ  ಮೂರ್ತಿಯಿರೆ ಭಯವ್ಯಾಕೆ ಭಕ್ತಜನಕೆ ||ಪ|| ನಯದಿಂದ ಗೆಲಿಸುವನು ನಾಲ್ದಿಕ್ಕಿನೊಳಗಿದ್ದ ಮಾಯವಾದಿಗಳನ್ನು ||ಅ . ಪ|| ಆದಿಯಲಿ ಬ್ರಹ್ಮನಿಗೆ ಭೀತಿಯನು ಬಿಡಿಸಿದ ನಾದಮಯನಾದ ದೇವ ಭೇದವಿಲ್ಲದೆ ಎಲ್ಲಾ ಭೇದವೆಂಬುವರನ್ನು ಕಾದ ಬಾಣಲೆಗೆ ತಟ್ಟಿ ಮೋದಿಸಿ ಕೊಲುವ ||೧|| ಉದಯದಲ್ಲಿ ಎದ್ದು ನರ ಸದಮಲಾತ್ಮಕನಾಗಿ ಹೃದಯದೊಳಗೆ ಹರಿಯ ತಂದು ಮುಂದು ಸದಯನು ನೀನೆನುತ ಸದ್ವೃತ್ತಿಉದಯನು ನೀನೆನುತ ದಧಿಚೋರ ಕೃಷ್ಣನ್ನ ಮುದದಿ ಭಜಿಪರಿಗೆ ||೨|| ದುಷ್ಟಮಲ್ಲರ ಎದೆ ಮೆಟ್ಟಿ ಮೆರೆವ ಜಗಜಟ್ಟಿ ಮಧ್ವರಾಯರ ಮುಟ್ಟಿ ಭಜಿಸುತ ನಿತ್ಯ ಇಷ್ಟವನು ಬೇಡಿದರೆ ಕಷ್ಟಗಳನು ಕಳೆವ ಉತ್ಕೃಷ್ಟ ಹಯವದನ ದೊರೆ ||೩|| jayapradanu jagake shri hayavadana murthiyire  bhayavyaake bhakthajanake ||p||  nayadimda gelisuvanu naaldikkinoLagidda  maayavaadigaLannu ||aa .p||  aadiyali brahmanige bhithiyanu biDisida  naadamayanaada deva bhedavillade ellaa  bhedavembuvarannu kaada baaNalege  thaTTi modisi koluva ||೧||  udayadalli eddu nara sadamalaathmakanaagi  hrridayadoLage hariya thamdu mumdu  sadayanu ninenut...

ಜಯ ಜಯ ಶ್ರೀ ಹಯವದನ | ಹಯವದನ | Jaya Jaya Sri Hayavadana | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಜಯ ಜಯ ಶ್ರೀ ಹಯವದನ ಜಯ ಜಯ ಶ್ರೀ ಖಳದಮನ  ಜಯತು ಸಜ್ಜನ ಸದನ ಸಕಲ ಆಭರಣ ||ಪ|| ರಾಘವಾನ್ವಯಸೋಮ ಖರನಿಶಾಚರ ಭೀಮ ಸಕಲ ಸದ್ಗುಣಧಾಮ ಸೀತಾಭಿರಾಮ  ಕಾಮಿನೀಜನಕಾಮ ಶರಣಪಾಲಕ ಧಾಮ ಸ್ವಬಲ ಪಾಲಿತ ರಾಮ ಪಟ್ಟಾಭಿರಾಮ ||೧|| ಯಾದವಾನ್ವಯಜಾತ ವರಸತ್ಯಭಾಮೇತ ವ್ಯಾಸರಾಯಸನ್ನುತ ಸಕಲವಾಗ್ವಿದಿತಾ ಕಂಜಾಸನಾದಿನುತ ಕಮಲಮಾರ್ಗಣಪಿತ ಸರಸ ರುಕ್ಮೀಣೀಕಾಂತ ಸಕಲೇಷ್ಟದಾತ ||೨|| ವಾಸಿಷ್ಠಕುಲವಾರ್ಧಿ ಸತ್ಕಳಾಧರರೂಪ ಮಧ್ವಾರ್ಯ ಸದ್ರೂಪ ದಳಿತಬಹುತಾಪ ಮಾಯಿಜನಧೃತಕೋಪ ಕೃತಸದ್ವೀಕ್ಷೋದ್ದೀಪ ಸೃತಾನಿ ಸತ್ಸುಖರೂಪ ಹಯವದನರೂಪ ||೩|| jaya jaya shri hayavadana jaya jaya shri khaLadamana  jayathu sajjana sadana sakala aabharaNa ||p||  raaghavaanvayasoma kharanishaachara bhima  sakala sadguNadhaama sithaabhiraama  kaaminijanakaama sharaNapaalaka dhaama  svabala paalitha raama paTTaabhiraama ||೧||  yaadavaanvayajaatha varasathyabhaametha  vyaasaraayasannutha sakalavaagvidithaa  kamjaasanaadinutha kamalamaargaNapitha  sarasa rukmiNikaamtha sakaleshhTadaatha ||೨||  vaasishhThakulavaardhi sathkaLaadh...

ಆನಂದ ತೀರ್ಥರೆಂಬೊ - ಗುರುಮಧ್ವ ಮುನಿರಾಯ | ಹಯವದನ |Ananda Theertharembo | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಆನಂದ ತೀರ್ಥರೆಂಬೊ ಅರ್ಥಿಯ ಪೆಸರುಳ್ಳ ಗುರು ಮಧ್ವ ಮುನಿರಾಯ ||ಪ|| ಏನೆಂಬೆ ನಾ ನಿನ್ನ ಗುಣ ಮಹಾತ್ಮೆಗೆ ಗುರು ಮಧ್ವ ಮುನಿರಾಯ ||ಅ. ಪ || ಮುಖ್ಯಪ್ರಾಣ ರೂಪನಾಗಿ ಮುನಿಯ ಚಾರಿತ್ರ್ಯ ತಾಳಿದಿ ಗುರು ಮಧ್ವ ಮುನಿರಾಯ || ಸೊಕ್ಕಿದ ದೈತ್ಯರ ಸೊಕ್ಕು ಮುರಿದು ಶೋಭಿಸಿದಿ  ಗುರು ಮಧ್ವ ಮುನಿರಾಯ ||೧|| ವಾನರೇಂದ್ರ ರೂಪನಾಗಿ ವಾರಿಧಿಯ ದಾಟಿದೆಯೋ  ಗುರು ಮಧ್ವ ಮುನಿರಾಯ || ಜಾನಕಿಗುಂಗುರ ಕೊಟ್ಟು ಜಗಜ್ಜಟ್ಟಿಗಳ ಕುಟ್ಟಿದಿ ಗುರು ಮಧ್ವ ಮುನಿರಾಯ ||೨ || ಕ್ಷಿತಿಯೊಳು ಕುಂತಿಸುತ ಭೀಮನೆಂದೆನಿಸಿದಿ ಗುರು ಮಧ್ವ ಮುನಿರಾಯ || ಅಹಿತದಿಂದ ಯದುಪತಿಯ ಭಜಿಸಿದಿ ಗುರು ಮಧ್ವ ಮುನಿರಾಯ ||೩|| ಚಿಕ್ಕತನದಲ್ಲಿ ಶ್ರೀ ಕೃಷ್ಣನ ಪೂಜಿಸಿದಿ ಗುರು ಮಧ್ವ ಮುನಿರಾಯ || ಏಕವಿಂಶತಿ ಕುಭಾಷ್ಯವ ಜರಿದೆಯೋ ಗುರು ಮಧ್ವ ಮುನಿರಾಯ ||೪|| ಅತಿಬಲವಂತ ಶ್ರೀ ಹಯವದನನ್ನ ಭಜಿಸಿದ್ಯೋ ಗುರು ಮಧ್ವ ಮುನಿರಾಯ || ಸತತ ಭಕ್ತರಿಗೆ ಕರುಣಾಮೃತವ ಕರೆದೆ ಗುರು ಮಧ್ವ ಮುನಿರಾಯ ||೫|| aanamda thirthharembo arthhiya pesaruLLa guru madhva muniraaya ||p||  enembe naa ninna guNa mahaathmege guru madhva muniraaya ||a. pa ||  mukhyapraaNa rupanaagi muniya chaarithrya thaaLidi guru madhva muniraaya ||  sokkida daithya...

ಜೋ ಜೋ ಕಂದರ್ಪಕೋಟಿ ಲಾವಣ್ಯ | ಹಯವದನ | Jo Jo Kandarpa koti | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಜೋ ಜೋ ಕಂದರ್ಪಕೋಟಿ ಲಾವಣ್ಯ ಜೋ ಜೋ ವೃಂದಾರಕ ಶಿರೋರನ್ನ ||ಪ|| ಜೋ ಜೋ ನಂದನ ಸುಕೃತದ ಫಲವೆ ಜೋ ಜೋ ಮುನಿಮನಮಧುಪ ಕಮಲವೆ ||ಅ. ಪ|| ಪೊನ್ನತೊಟ್ಟಿಲ ಮೇಲೆ ಮಣಿಮಯವಾದ ವಿತಾನ್ನವ ಕಟ್ಟಿ ಪಟ್ಟೆಯ ಮೇಲ್ವಾಸಿನಲಿ | ಚಿನ್ನ ಶ್ರೀ ಕೃಷ್ಣನ ಮಲಗಿಸಿ ಗೋಕುಲದ ಕನ್ನೆಯರೆಲ್ಲ ತೂಗುತ ಪಾಡಿದರೆ ||೧|| ಶಶಿಯ ಚೆಲುವ ಪೋಲ್ವ ಮೊಗದ ಚೆನ್ನಿಗನೆ ಎಸೆವ ಕಿರುಡೊಳ್ಳಿನ ಸೊಬಗ ಬಾಲಕನೆ | ಪೊಸಕೆಂದಾವರೆಯಂದದಿ ಮೃದುಪದನೇ ಬಿಸರುಹನಯನ ಬಿಡದಿರೆಮ್ಮ ಕಂದ ||೨|| ಪೂತನಿ ಅಸುವನೀಂಟಿದ ಪೋತ ಶಿಶುವೆ ವಾತದೈತ್ಯನ ಗೆಲಿದದುಭುತ ಬಾಲ | ಭೂತಗಳನಂಜಿಸುವರ್ಭಕನೆ ಓತೆಮ್ಮ ಶಿಶುಗಳ ಸಲಹೋ ಶ್ರೀ ಹರಿಯೆ ||೩|| ಅಮೃತವನೂಡಿ ಸುರರ ಬೆಳೆಸಿದನೆ ಭ್ರಮಿತನಾದ ಕರಿವರನ ಕಾಯ್ದವನೆ | ಸುಮುಖತನದಿ ಪರೀಕ್ಷಿತನ ಪೊರೆದನೆ ಮಮತೆಯಿಂದೆಮ್ಮ ಶಿಶುಗಳ ನೀ ಸಲಹೋ  ||೪|| ಪೊಳೆವ ಮೂಲರೂಪದಿ ತೋರಿದೆ ನೀ-ನುಳಿದ ಶಿಶುಗಳಂತೆ ಶಿಶುವೆನ್ನಬಹುದೆ | ಲಲನೆ ಬೇಡಿಕೊಳ್ಳೆ ತನ್ನ ತಾನೆ ಶಿಶು - ಗಳ ಭಾವವಿಡಿದೆಯೆಂದೆಂಬರು ನಿನ್ನ ||೫|| ಈ ಮಹಿಯೊಳು ಹರಿ ಶಿಶುವಾಗೆ ತನ್ನ ಮ - ಹಿಮೆಯ ತುತಿಸುವ ಶ್ರುತಿವನಿತೆಯರು | ವ್ಯಾಮೋಹದಿ ಬಂದು ಲಲನೆಯರಾದರು ಆ ಮುಗ್ಧೆಯರು ಪಾಡುತ ತೂಗಿದರೆ ||೬|| ನೀ ಶಿಶುವಾದರೆ ನಿನ್ನುದರೊದಳಿರ್ದ ಶ್ರುತಿಮುಕ್ತರು ಶಿಶುಗಳೆಂತಾಹರೋ | ವೇಷಧರನಾಗಿ ಶಿಶುಗಳ ವಾಸಿನೊಲಿದೆ ವಾಸುದೇವ ನಮ್ಮ ಬಿ...

ಲಾಲಿ ಲಾಲಿ ಹನುಮ ಭೀಮ ಮಧ್ವಾರ್ಯ | ಹಯವದನ | Laali Laali Hanuma Bhima | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಲಾಲಿ ಲಾಲಿ ಹನುಮ ಭೀಮ ಮಧ್ವಾರ್ಯ ಲಾಲಿ ರಾಮಕೃಷ್ಣ ವ್ಯಾಸರ ಪ್ರೀಯ ||ಪ|| ಮೂಜಗದಲಿ ನೀ ಬಾಲ ಬ್ರಹ್ಮಚಾರಿ ಈ ಜಗದಲಿ ಕಪಿ ರಾಜ್ಯವನಾಳಿ ತೇಜಮುತ್ತಿನ ಕವಚ ಕುಂಡಲಧಾರಿ ಪೂಜಿಪರ ಪಾಲಿಪೆ ಸುಜನರುಪಕಾರಿ ||೧|| ಭೂಮಿ ಭಾರವನಿಳುಹೆ ಬಂದೆ ಕಲಿಭೀಮ ಕಾಮಿ ಕೀಚಕರನ್ನು ಕುಟ್ಟಿ ರಣಧಾಮ ಭಾಮಿನಿ ದ್ರೌಪದಿ ಕಷ್ಟನಿರ್ಧೂಮ ಕಾಮಿತಾರ್ಥಗಳಿತ್ತು ಸಲಹೋ ನಿಸ್ಸೀಮ ||೨|| ಸೌಂದರ್ಯರೂಪದ ಶ್ರೀಮದಾನಂದ ತಂದೆ ಹಯವದನನ ಮೋಹದ ಕಂದ ಬಂದು ಉಡುಪಿಯಲಿ ನೆಲೆಯಾಗಿ ನಿಂದ ವಂದಿಸುವೆ ನಿದ್ರೆಗೈ ಹರಿಧ್ಯಾನದಿಂದ ||೩|| laali laali hanuma bhima madhvaarya  laali raamakrrishhNa vyaasara priya ||p||  mujagadali ni baala brahmachaari  ia jagadali kapi raajyavanaaLi  thejamuththina kavacha kumDaladhaari  pujipara paalipe sujanarupakaari ||೧||  bhumi bhaaravaniLuhe bamde kalibhima  kaami kichakarannu kuTTi raNadhaama  bhaamini draupadi kashhTanirdhuma  kaamithaarthhagaLiththu salaho nissima ||೨||  saumdaryarupada shrimadaanamda  thamde hayavadanana mohada kamda  bamdu uDupiyali neleyaagi nimda...

ಆಂಜನೇಯನೆ ಅಮರವಂದಿತ | ಹಯವದನ | Anjaneyane Amara vandita | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಆಂಜನೇಯನೆ  ಅಮರ ವಂದಿತ ಕಂಜನಾಭನ ದೂತನೆ ||ಪ || ಮಂಜಿನೋಲಗದಂತೆ  ಶರಾಧಿಯ ದಾಟಿದ ಮಹಾ ಧೀರನೆ ||ಅ. ಪ|| ಆಂಜನೇಯನೆ ನಿನ್ನ ಗುಣಗಳ ಪೊಗಳಲಳವೆ ಪ್ರಖ್ಯಾತನೇ || ಸಂಜೀವನವ ತಂದು ಕಪಿಗಳ ನಂಜು ಕಳೆದ ಪ್ರಖ್ಯಾತನೇ || ೧ || ಕಾಮನಿಗ್ರಹನೆನಿಸಿ ಸುರರಭಿಮಾನಿ ದೇವತೆ ಎನಿಸಿದೆ ||  ರಾಮಪಾದಕ್ಕೆರಗಿ ನಡೆದು ನಿಸ್ಸೀಮ ನೀನೆoದೆನಿಸಿದೆ ||೨|| ಸಿಂಧು ಹಾರಿದೆ ಶೀಘ್ರದಿಂದಲಿ ಬಂದು ಸೀತೆಗೆ ನಮಿಸಿದೆ || ತಂದು ಮುದ್ರೆಯನಿತ್ತು ಮಾತೆಯ ಮನವ ಸಂತೋಷಪಡಿಸಿದೆ ||೩|| ಜನಕ ತನುಜೆಯ ಮನವ ಹರ್ಷಿಸಿ ವನವ ಕಿತ್ತೀಡಾಡಿದೆ ||  ಧನುಜರನ್ನು ಸದೆದು ಲಂಕೆಯ ಅನಲಗಾಹುತಿ ಮಾಡಿದೆ ||೪|| ರಾಮಕಾರ್ಯವ ವಹಿಸಿ ಅಕ್ಷಕುಮಾರನನು ಸಂಹರಿಸಿದೆ || ಘೋರ ರಕ್ಕಸರೆಂಬುವರನು ಮಾರಿ ವಶವನುಗೈಸಿದೆ ||೫|| ಭರದಿ ಬಂದು ರಾಮಪಾದಕ್ಕೆರಗಿ ಬಿನ್ನಹ ಮಾಡಿದೆ || ಉರಗ ಗಿರಿ ಹಾಯವದನನ ಪರಮ ಭಕ್ತನೆಂದೆನಿಸಿದೆ ||೬|| aaamjaneyane amara vamditha kamjanaabhana duthane ||pa ||  mamjinolagadamthe sharaadhiya daaTida mahaa dhirane ||a. p||  aaamjaneyane ninna guNagaLa pogaLalaLave prakhyaathane ||  samjivanava thamdu kapigaLa namju kaLeda prakhyaathane ||1||  kaamanigrahanenisi surarabh...

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru