VIDEO
ರಚನೆ : ಶ್ರೀ ಜಗನ್ನಾಥ ದಾಸರು
Krithi : Sri Jagannatha Dasaru
ಫಲವಿದು ಬಾಳ್ದುದಕೆ ಸಿರಿ-
ನಿಲಯನ ಗುಣಗಳ ತಿಳಿದು ಭಜಿಸುವುದೆ | ಪ |
ಸ್ವೋಚಿತ ಕರ್ಮಗಳಾಚರಿಸುತ ಬಲು
ನೀಚರಲ್ಲಿಗೆ ಪೋಗಿ ಯಾಚಿಸದೆ
ಖೇಚರವಾಹ ಚರಾಚರ ಬಂಧಕ
ಮೋಚಕನಹುದೆಂದ್ಯೋಚಿಸುತಿಪ್ಪುದೆ | ೧ |
ನಿಚ್ಚಸುಭಕುತಿಯೊಳಚ್ಯುತನಂಘ್ರಿಗ-
ಳರ್ಚಿಸಿ ಮೆಚ್ಚಿಸುತೆಚ್ಚರದಿ
ತುಚ್ಛವಿಷಯಗಳನಿಚ್ಛಿಸದಲೆ ಯ-
ದೃಚ್ಛಾಲಾಭದಿಂ ಪ್ರೋಚ್ಚನಾಗುವದೆ | ೨ |
ವಾಸವಮುಖ ವಿಬುಧಾಸುರ ನಿಚಯಕೆ
ವಾಸುದೇವನೆ ಶುಭಾಶುಭದ
ಈ ಸಮಸ್ತಜಗಕೀಶ ಕೇಶವಾ-
ನೀಶ ಜೀವರೆಂಬೀ ಸುಜ್ಞಾನವೆ | ೩ |
ಮನೋವಾಕ್ಕಾಯದೊಳನುಭವಿಸುವ
ದಿನದಿನದಿ ವಿಷಯಸಾಧನಗಳನು
ಅನಿಲಾಂತರ್ಗತ ವನರುಹದಳಲೋ-
ಚನಗರ್ಪಿಸಿ ದಾಸನು ನಾನೆಂಬುದೇ | ೪ |
ಪಂಚಭೇದಯುತ ಪ್ರಪಂಚವು ಸತ್ಯ ವಿ-
ರಿಂಚಿ ಭವಮುಖರು ಬಲಿವಂಚಕಗೆ
ಸಂಚಲ ಪ್ರತಿಮೆ ಅಚಂಚಲ ಪ್ರಕೃತಿಯು
ಸಂಚಿಂತಿಸಿ ಮುದಲಾಂಛಿತನಹುದೆ | ೫ |
ಪಂಚ ಋತುಗಳಲಿ ಪಂಚಾಗ್ನಿಗಳಲಿ
ಪಂಚ ಪಂಚರೂಪವ ತಿಳಿದು
ಪಂಚಸುಸಂಸ್ಕಾರಾಂಚಿತನಾಗಿ ದ್ವಿ-
ಪಂಚಕರಣದಲಿ ಪಂಚಕನರಿವುದೆ | ೬ |
ಹೃದಯದಿ ರೂಪವು ವದನದಿ ನಾಮವು
ಉದರದಿ ನೈವೇದ್ಯವು ಶಿರದಿ
ಪದಜಲ ನಿರ್ಮಾಲ್ಯವನೆ ಧರಿಸಿ ಕೋ-
ವಿದರ ಸದನ ಹೆಗ್ಗದವ ಕಾಯ್ವದಿದೆ | ೭ |
ಪಾತ್ರರ ಸಂಗಡ ಯಾತ್ರೆಯ ಚರಿಸುತ ವಿ-
ಧಾತೃಪಿತನ ಗುಣಸ್ತೋತ್ರಗಳಾ
ಶ್ರೋತ್ರದಿ ಸವಿದು ವಿಚಿತ್ರಾನಂದದಿ
ಗಾತ್ರವ ಮರೆದು ಪಾರತ್ರಿಕ ಪಡೆವುದೆ | ೮ |
ಹಂಸಮೊದಲು ಹದಿನೆಂಟು ರೂಪಗಳ
ಸಂಸ್ಥಾನವ ತಿಳಿದನುದಿನದಿ
ಸಂಸೇವಿಸುವ ಮಹಾಪುರುಷರ ಪದ
ಪಾಂಸುವ ಧರಿಸಿ ಅಸಂಶಯನಪ್ಪುದೆ | ೯ |
ಪವನಮತಾನುಗನಾನಹುದೆಂ-
ದವನಿಯೊಳಗೆ ಸತ್ಕವಿಜನರ
ಭವನಗಳಲಿ ಪ್ರತಿದಿವಸದಿ ಸುಕಥಾ
ಶ್ರವಣವ ಮಾಡುತ ಪ್ರವರನಾಗುವುದೇ ||೧೦||
ಪ್ರತಿದಿವಸ ಶ್ರುತಿಸ್ಮೃತಿಗಳಿಂದ ಸಂ-
ಸ್ತುತಿಸುತ ಲಕ್ಷ್ಮೀಪತಿಗುಣವ
ಕೃತಿಪತಿ ಸೃಷ್ಟಿಸ್ಥಿತಿಲಯ ಕಾರಣ
ಇತರ ಸರ್ವ ದೇವತೆಗಳೆಂಬುದೆ ||೧೧||
ಗುಣಕಾಲಾಹ್ವಯ ಆಗಮಾರ್ಣವ ಕುಂ-
ಭಿಣಿ ಪರಮಾಣ್ವಂಬುಧಿಗಳಲಿ
ವನಗಿರಿನದಿ ಮೊದಲಾದದರೊಳಗಿಂ-
ಧನಗತ ಪಾವಕನಂತಿಹನೆಂಬುದೆ ||೧೨||
ಏಕೋತ್ತರ ಪಂಚಾಶದ್ವರ್ಣಗ-
ಳೇಕಾತ್ಮನ ನಾಮಂಗಳಿವು
ಮಾಕಮಲಾಸನ ಮೊದಲಾದಮರರು
ಸಾಕಲ್ಯದಿ ಇವರರಿಯೆಂಬುದೇ ||೧೩||
ಮೇದಿನಿ ಪರಮಾಣ್ವಂಬುಕಣಂಗಳ
ನೆನೆಬಹುದು ಪರಿಗಣನೆಯನು
ಮಾಧವನಾನಂದದಿ ಗುಣಂಗಳ-
ನಾದಿ ಕಾಲದಲಿ ಅಗಣಿತವೆಂಬುದೆ ||೧೪||
ವರಗಾಯತ್ರೀನಾಮಕ ಹರಿಗೀ-
ರೆರಡಂಘ್ರಿಗಳ ವಿವರವ ತಿಳಿದು
ತರುವಾಯದಿ ಷಡ್ವಿಧರೂಪವ ಸಾ-
ದರದಲಿ ಧೇನಿಸಿ ನಿರುತ ಜಪಿಸುವುದೆ |೧೫|
ಅನಲಾಂಗಾರನೊಳಿದ್ದೋಪಾದಿಯ-
ಲನಿರುದ್ಧನು ಚೇನರೊಳಗೆ
ಕ್ಷಣಬಿಟ್ಟಗಲದೆ ಏಕೋ ನಾರಾ-
ಯಣ ಶ್ರುತಿಪ್ರತಿಪಾದ್ಯನು ಇಹನೆಂಬುದೆ ||೧೬||
ಗೃಹಕರ್ಮವ ಬ್ಯಾಸರದಲೆ ಪರಮೋ-
ತ್ಸಹದಿ ಮಾಡುತ ಮೂಜಗದ
ಮಹಿತನ ಸೇವೆ ಇದೇ ಎನುತಲಿ ಹರುಷದಿ
ಅಹರಹರ್ಮನದಿ ಸಮರ್ಪಿಸುತಿಪ್ಪುದೆ | ೧೭ |
ಹರಿಕಥೆ ಪರಮಾದರದಲಿ ಕೇಳುತ
ಮರೆದು ತನುವ ಸುಖ ಸುರಿವುತಲೀ
ಉರುಗಾಯನ ಸಂದರುಶನ ಹಾರೈ-
ಸಿರುಳು ಹಗಲು ಜರಿಜರಿದು ಬಳಲುವದೆ ||೧೮||
ಬಿಗಿದ ಕಂಠದಿಂ ದೃಗ್ಭಾಷ್ಯಗಳಿಂ-
ನಗೆ ಮೊಗದಿಂ ರೋಮಾಂಚಗಳಿಂ-
ಮಿಗೆ ಸಂತೋಷದಿ ನೆಗೆದಾಡುತ ನಾ-
ಲ್ಮೊಗನೈಯ್ಯನ ಗುಣಪೊಗಳಿ ಹಿಗ್ಗುವದೆ | ೧೯ |
ಆ ಪರಮಾತ್ಮಗೆ ರೂಪದ್ವಯವು ಪ-
ರಾಪರ ತತ್ತ್ವಗಳಿದರೊಳಗೆ
ಸ್ತ್ರೀ ಪುಂ ಭೇದದಿ ಈ ಬ್ರಹ್ಮಾಂಡದಿ
ವ್ಯಾಪಿಸಿಹನಿಂದೀಪರಿ ತಿಳಿವುದೆ | ೨೦ |
ಒಂದು ರೂಪದೊಳಗನಂತರೂಪಗಳು
ಪೊಂದಿಪ್ಪವು ಗುಣಗಣಸಹಿತ
ಹಿಂದೆ ಮುಂದೆ ಎಂದೆಂದಿಗೂ ಗೋ-
ವಿಂದಗೆ ಸರಿಮಿಗಿಲಿಲ್ಲೆಂತೆಂಬುದೆ | ೨೧ |
ಕಾರಣ ಕಾರ್ಯಾಂತರ್ಗತ ಅಂಶವ-
ತಾರಾವೇಶಾಹಿತ ಸಹಜ
ಪ್ರೇರಕ ಪ್ರೇರ್ಯಾಹ್ವಯ ಸರ್ವತ್ರ ವಿ-
ಕಾರವಿಲ್ಲದೆಲೆ ತೋರುವನೆಂಬುದೆ | ೨೨ |
ಕ್ಲೇಶಾನಂದಗಳೀಶಾಧೀನ ಸ-
ಮಾಸಮ ಬ್ರಹ್ಮಸದಾಶಿವರೂ
ಈಶಿತವ್ಯರು ಪರೇಶನಲ್ಲದೇ
ಶ್ವಾಸ ಬಿಡೋ ಶಕ್ತಿ ಲೇಸಿಲ್ಲೆಂಬುದೆ | ೨೩ |
ಪಕ್ಷ್ಮಗಳಕ್ಷಿಗಳಗಲದಲಿಪ್ಪಂತೆ
ಅಕ್ಷರ ಪುರುಷನಪೇಕ್ಷಿಸುತಲೀ-
ಕುಕ್ಷಿಯೊಳಬ್ಜತ್ರ್ಯಕ್ಷಾದ್ಯಮರರ
ಈಕ್ಷಿಸಿ ಕರುಣದಿ ರಕ್ಷಿಪನೆಂಬುದೆ ||೨೪||
ಮೂಜಗದೊಳಗಿಹ ಭೂಜಲ ಖೇಚ-
ರ ಜಲ ನಿಶಾಚರ ಈ ಜೀವರೊಳು ಮ-
ಹೌಜಸನ ಸೋಜಿಗ ಬಹುವಿಧ ವಿಭೂತಿಯ
ಪೂಜಿಸುತನುದಿನ ರಾಜಿಸುತಿಪ್ಪುದೆ | ೨೫ |
ವಿಷಯೇಂದ್ರಿಯಗಳಲಿ ತದಭಿಮಾನಿ ಸುಮ-
ನಸರೊಳು ನಿಂದು ನಿಯಾಮಿಸುತಾ-
ಶ್ವಸನಾಂತರ್ಗತ ವಾಸುದೇವ ತಾ
ವಿಷಯಂಗಳ ಭೋಗಿಸುವನೆಂದರಿವುದೆ | ೨೬ |
ಪನ್ನಗಾಚಲಸನ್ನಿವಾಸ ಪಾ-
ವನ್ನ ಚರಿತ ಸದ್ಗುಣಭರಿತಾ-
ಜನ್ಯ ಜನಕ ಲಾವಣ್ಯೈಕನಿಧಿ ಜ-
ಗನ್ನಾಥವಿಠ್ಠಲಾನ್ಯಪನೆಂಬುದೇ | ೨೭ |
Palavidu bALdudake siri-
nilayana guNagaLa tiLidu Bajisuvude | pa |
svOcita karmagaLAcarisuta balu
nIcarallige pOgi yAcisade
KEcaravAha carAcara baMdhaka
mOcakanahudeMdyOcisutippude | 1 |
niccasuBakutiyoLacyutanaMGriga-
Larcisi meccisuteccaradi
tucCaviShayagaLanicCisadale ya-
dRucChaalABadiM prOccanAguvade | 2 |
vAsavamuKa vibudhAsura nicayake
vAsudEvane SuBASuBada
I samastajagakISa kESavA-
nISa jIvareMbI suj~jAnave | 3 |
manOvAkkAyadoLanuBavisuva
dinadinadi viShayasAdhanagaLanu
anilAMtargata vanaruhadaLalO-
canagarpisi dAsanu nAneMbudE | 4 |
paMcaBEdayuta prapaMcavu satya vi-
riMci BavamuKaru balivaMcakage
saMcala pratime acaMcala prakRutiyu
saMciMtisi mudalAMCitanahude | 5 |
paMca RutugaLali paMcAgnigaLali
paMca paMcarUpava tiLidu
paMcasusaMskArAMcitanAgi dvi-
paMcakaraNadali paMcakanarivude | 6 |
hRudayadi rUpavu vadanadi nAmavu
udaradi naivEdyavu Siradi
padajala nirmAlyavane dharisi kO-
vidara sadana heggadava kAyvadide | 7 |
pAtrara saMgaDa yAtreya carisuta vi-
dhAtRupitana guNastOtragaLA
SrOtradi savidu vicitrAnaMdadi
gAtrava maredu pAratrika paDevude | 8 |
haMsamodalu hadineMTu rUpagaLa
saMsthAnava tiLidanudinadi
saMsEvisuva mahApuruShara pada
pAMsuva dharisi asaMSayanappude | 9 |
pavanamataanuganaanahudeM-
davaniyoLage satkavijanara
bhavanagaLali pratidivasadi sukathaa
shravaNava maaDuta pravaranaaguvudE ||10||
pratidivasa shrutismRutigaLiMda saM-
stutisuta lakShmIpatiguNava
kRutipati sRuShTisthitilaya kaaraNa
itara sarva dEvategaLeMbude ||11||
guNakaalaahvaya AgamaarNava kuM-
bhiNi paramaaNvaMbudhigaLali
vanagirinadi modalaadadaroLagiM-
dhanagata paavakanaMtihaneMbude ||12||
EkOttara paMcaashadvarNaga-
LEkaatmana naamaMgaLivu
maakamalaasana modalaadamararu
saakalyadi ivarariyeMbudE ||13||
mEdini paramaaNvaMbukaNaMgaLa
nenebahudu parigaNaneyanu
maadhavanaanaMdadi guNaMgaLa-
naadi kaaladali agaNitaveMbude ||14||
varagAyatrInAmaka harigI-
reraDaMGrigaLa vivarava tiLidu
taruvAyadi ShaDvidharUpava sA-
daradali dhEnisi niruta japisuvude |15|
analaaMgaaranoLiddOpaadiya-
laniruddhanu cEnaroLage
kShaNabiTTagalade EkO naaraa-
yaNa shrutipratipaadyanu ihaneMbude ||16||
gRuhakarmava byAsaradale paramO-
tsahadi maaDuta mUjagada
mahitana sEve idE enutali haruShadi
aharaharmanadi samarpisutippude | 17 |
harikathe paramaadaradali kELuta
maredu tanuva suKa surivutalI
urugaayana saMdarushana haarai-
siruLu hagalu jarijaridu baLaluvade ||18||
bigida kaMThadiM dRugBAShyagaLiM-
nage mogadiM rOmAMcagaLiM-
mige saMtOShadi negedADuta nA-
lmoganaiyyana guNapogaLi higguvade | 19 |
A paramAtmage rUpadvayavu pa-
rApara tattvagaLidaroLage
strI puM BEdadi I brahmaaMDadi
vyApisihaniMdIpari tiLivude | 20 |
oMdu rUpadoLaganaMtarUpagaLu
poMdippavu guNagaNasahita
hiMde muMde eMdeMdigU gO-
viMdage sarimigililleMteMbude | 21 |
kAraNa kAryAMtargata aMSava-
tArAvESAhita sahaja
prEraka prEryAhvaya sarvatra vi-
kAravilladele tOruvaneMbude | 22 |
klESAnaMdagaLISAdhIna sa-
mAsama brahmasadASivarU
ISitavyaru parESanalladE
SvAsa biDO Sakti lEsilleMbude | 23 |
pakShmagaLakShigaLagaladalippaMte
akShara puruShanapEkShisutalI-
kukShiyoLabjatryakShaadyamarara
IkShisi karuNadi rakShipaneMbude ||24||
mUjagadoLagiha BUjala KEca-
ra jala nishaacara I jIvaroLu ma-
haujasana sOjiga bahuvidha viBUtiya
pUjisutanudina rAjisutippude | 25 |
viShayEMdriyagaLali tadaBimAni suma-
nasaroLu niMdu niyAmisutA-
SvasanAMtargata vAsudEva tA
viShayaMgaLa BOgisuvaneMdarivude | 26 |
pannagAcalasannivAsa pA-
vanna carita sadguNaBaritA-
janya janaka lAvaNyaikanidhi ja-
gannAthaviThThalAnyapaneMbudE | 27 |
Comments
Post a Comment