Posts

Showing posts from September, 2023

ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಫಲವಿದು ಬಾಳ್ದುದಕೆ | ಶ್ರೀ ಜಗನ್ನಾಥ ದಾಸರ ಕೃತಿ | Phalavidu Baldudake | Sri Jagannatha Dasara Kruti

Image
  ರಚನೆ : ಶ್ರೀ ಜಗನ್ನಾಥ ದಾಸರು Krithi : Sri Jagannatha Dasaru ಫಲವಿದು ಬಾಳ್ದುದಕೆ ಸಿರಿ- ನಿಲಯನ ಗುಣಗಳ ತಿಳಿದು ಭಜಿಸುವುದೆ | ಪ | ಸ್ವೋಚಿತ ಕರ್ಮಗಳಾಚರಿಸುತ ಬಲು ನೀಚರಲ್ಲಿಗೆ ಪೋಗಿ ಯಾಚಿಸದೆ ಖೇಚರವಾಹ ಚರಾಚರ ಬಂಧಕ ಮೋಚಕನಹುದೆಂದ್ಯೋಚಿಸುತಿಪ್ಪುದೆ | ೧ | ನಿಚ್ಚಸುಭಕುತಿಯೊಳಚ್ಯುತನಂಘ್ರಿಗ- ಳರ್ಚಿಸಿ ಮೆಚ್ಚಿಸುತೆಚ್ಚರದಿ ತುಚ್ಛವಿಷಯಗಳನಿಚ್ಛಿಸದಲೆ ಯ- ದೃಚ್ಛಾಲಾಭದಿಂ ಪ್ರೋಚ್ಚನಾಗುವದೆ | ೨ | ವಾಸವಮುಖ ವಿಬುಧಾಸುರ ನಿಚಯಕೆ ವಾಸುದೇವನೆ ಶುಭಾಶುಭದ ಈ ಸಮಸ್ತಜಗಕೀಶ ಕೇಶವಾ- ನೀಶ ಜೀವರೆಂಬೀ ಸುಜ್ಞಾನವೆ | ೩ | ಮನೋವಾಕ್ಕಾಯದೊಳನುಭವಿಸುವ ದಿನದಿನದಿ ವಿಷಯಸಾಧನಗಳನು ಅನಿಲಾಂತರ್ಗತ ವನರುಹದಳಲೋ- ಚನಗರ್ಪಿಸಿ ದಾಸನು ನಾನೆಂಬುದೇ | ೪ | ಪಂಚಭೇದಯುತ ಪ್ರಪಂಚವು ಸತ್ಯ ವಿ- ರಿಂಚಿ ಭವಮುಖರು ಬಲಿವಂಚಕಗೆ ಸಂಚಲ ಪ್ರತಿಮೆ ಅಚಂಚಲ ಪ್ರಕೃತಿಯು ಸಂಚಿಂತಿಸಿ ಮುದಲಾಂಛಿತನಹುದೆ | ೫ | ಪಂಚ ಋತುಗಳಲಿ ಪಂಚಾಗ್ನಿಗಳಲಿ ಪಂಚ ಪಂಚರೂಪವ ತಿಳಿದು ಪಂಚಸುಸಂಸ್ಕಾರಾಂಚಿತನಾಗಿ ದ್ವಿ- ಪಂಚಕರಣದಲಿ ಪಂಚಕನರಿವುದೆ | ೬ | ಹೃದಯದಿ ರೂಪವು ವದನದಿ ನಾಮವು ಉದರದಿ ನೈವೇದ್ಯವು ಶಿರದಿ ಪದಜಲ ನಿರ್ಮಾಲ್ಯವನೆ ಧರಿಸಿ ಕೋ- ವಿದರ ಸದನ ಹೆಗ್ಗದವ ಕಾಯ್ವದಿದೆ | ೭ | ಪಾತ್ರರ ಸಂಗಡ ಯಾತ್ರೆಯ ಚರಿಸುತ ವಿ- ಧಾತೃಪಿತನ ಗುಣಸ್ತೋತ್ರಗಳಾ ಶ್ರೋತ್ರದಿ ಸವಿದು ವಿಚಿತ್ರಾನಂದದಿ ಗಾತ್ರವ ಮರೆದು ಪಾರತ್ರಿಕ ಪಡೆವುದ...

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru